ವಿಶ್ವ ದಾಖಲೆ ನಿರ್ಮಿಸಿದ ಮೀರಾಭಾಯಿ

0
25
loading...

ಗೋಲ್ಡ್‍ಕೋಸ್ಟ್: ಕಾಮನ್‍ವೆಲ್ತ್ ಗೇಮ್ಸ್‍ನ 21 ನೆ ಆವೃತ್ತಿಯ ಮೊದಲ ದಿನವೇ ಭಾರತ ತನ್ನ ಪದಕ ಬೇಟೆಯನ್ನು ಮುಂದುವರಿಸಿದ್ದು ವೆಯ್ಟ್ ಲಿಫ್ಟಿಂಗ್‍ನಲ್ಲಿ ಕನ್ನಡಿಗ ಗುರುರಾಜ್ ಬೆಳ್ಳಿ ಪದಕ ಪಡೆದ ಬೆನ್ನಲ್ಲೇ ಮಹಿಳಾ ವಿಭಾಗದಲ್ಲಿ ಮೀರಾಬಾಯ್ ಚಿನ್ನ ಗೆಲ್ಲುವ ಮೂಲಕ ಕುಣಿದು ಕುಪ್ಪಳಿಸಿದ್ದಾಳೆ. 48 ಕೆಜಿ ವಿಭಾಗದಲ್ಲಿ ಪಾಲ್ಗೊಂಡಿದ್ದ ಮೀರಾಭಾಯಿ ಚಿನ್ನ ಗೆಲ್ಲುವ ಮೂಲಕ 22 ವರ್ಷಗಳ ಹಿಂದೆ ಕರ್ಣಂಮಲ್ಲೇಶ್ವರಿ ಅವರ ಚಿನ್ನದ ಪದಕದ ಸಾಧನೆ ಸರಿಗಟ್ಟಿರುವುದೇ ಅಲ್ಲದೆ 6 ನೂತನ ದಾಖಲೆಗಳನ್ನು ನಿರ್ಮಿಸಿದ್ದಾರೆ. 2014ರಲ್ಲಿ ಗ್ಲಾಸ್‍ಗೋದಲ್ಲಿ ನಡೆದ ಕಾಮನ್‍ವೆಲ್ತ್ ಗಮ್ಸ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದ ಮೀರಾಬಾಯಿ ಇಲ್ಲಿ ಸ್ವರ್ಣ ಪದಕವನ್ನು ಗೆಲ್ಲುವ ಮೂಲಕ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿದ್ದಾರೆ.

loading...