ವೀರಶೈವ ಲಿಂಗಾಯತರು ಧರ್ಮ ಪಾಲನೆ ಮಾಡಿ : ಬೆದವಟ್ಟಿ ಶ್ರೀಗಳು

0
37
loading...

ಯಲಬುರ್ಗಾ: ಇಂದಿನ ದಿನಮಾನಗಳಲ್ಲಿ ವೀರಶೈವ ಲಿಂಗಾಯತರಲ್ಲಿ ಧರ್ಮ ಪಾಲನೆಯನ್ನು ಮರೆತು ಬದುಕುತ್ತಿದ್ದು,ಈ ನಿಟ್ಟಿನಲ್ಲಿ ಅವರೆಲ್ಲಾ ಧರ್ಮ ಪಾಲನೆಯನ್ನು ಅನುಸರಿಸಬೇಕೆಂದು ಬೆದವಟ್ಟಿಯ ಹಿರೇಮಠದ ಷ.ಬ್ರ. ಶಿವಸಂಗಮೇಶ್ವರ ಸ್ವಾಮೀಜಿ ಹೇಳಿದರು.

ಯಲಬುರ್ಗಾ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು,ವೀರಶೈವ ಸಮಾಜವು ಸಂಘವಾಗಬೇಕು.ಈ ನಿಟ್ಟಿನಲ್ಲಿ ಮಠಾಧೀಶರ ಒಕ್ಕೂಟದ ರಚನೆ ಅವಶ್ಯಕತೆ ಇದ್ದು.ಇವತ್ತಿನ ಮಹತ್ವದ ಸಭೆಯಲ್ಲಿ ಕರೆಯಲಾಗಿದ್ದ ಈ ಸಭೆ ಸೂಕ್ತವಾದ ಕಾರ್ಯ.ಇಂತಹ ಕಾರ್ಯಕ್ಕೆ ಜಿಲ್ಲೆಯ ಎಲ್ಲಾ ಮಠಾಧೀಶರ ಸಹಕಾರ ಅವಶ್ಯವಾಗಿದೆ ಎಂದರು.
ಸಂಸ್ಥಾನ ಹಿರೇಮಠದ ಷ.ಬ್ರ.ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ,ಸಮಾಜದಲ್ಲಿ ಒಗ್ಗಟ್ಟಿನಿಂದ ನಡೆದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ.ಈ ನಿಟ್ಟಿನಲ್ಲಿ ಜಿಲ್ಲೆಯ ಕನಕಗಿರಿಯ ಸುವರ್ಣಗಿರಿ ವಿರಕ್ತಮಠದಲ್ಲಿ ಮೇ.5 ರಂದು ಎಲ್ಲಾ ಮಠಾಧೀಶರ ಕರೆಯಲಾಗಿದ್ದು,ಎಲ್ಲಾರ ಸಹಾಯ ಸಹಕಾರ ನೀಡಬೇಕೆಂದರು.

ಕುಷ್ಠಗಿಯ ಮದ್ದಾನಿ ಹಿರೇಮಠದ ಕರಿಬಸವೇಶ್ವರ ಸ್ವಾಮೀಜಿಗಳು ಮಾತನಾಡಿ,ಜಿಲ್ಲೆಯ ಪೂಜ್ಯರ ಸಭೆ ಕರೆದಿದ್ದು ತುಂಬಾ ಮಹತ್ವವಾಗಿದ್ದು.ಇಂಥಹ ಸಭೆ ಯಶಸ್ವಿಯಾಗಬೇಕಾದರೆ ಎಲ್ಲರೂ ಧರ್ಮಪಾಲನೆ ಮಾಡಿ.ವೀರಶೈವ ಲಿಂಗಾಯತ ಧರ್ಮದ ಮಹತ್ವವನ್ನು ಸಮಾಜಕ್ಕೆ ಸಾರಬೇಕೆಂದು ಸಲಹೆ ನೀಡಿದರು.
ಈ ಸಭೆಯಲ್ಲಿ ಜಿಲ್ಲೆಯ ನೀಡಶೇಸಿ ಶ್ರೀಗಳು, ಮಂಗಳೂರು ಶ್ರೀಗಳು, ಹುಣಸಿಹಾಳ ಶ್ರೀಗಳು, ಮೈನಹಳ್ಳಿ ಶ್ರೀಗಳು, ಮಾನ್ವಿಹಳ್ಳಿ ಶ್ರೀಗಳು, ಟಿಕನಕಲ್ ಶ್ರೀಗಳು, ತಟ್ಟಿಕಾನ ಶ್ರೀಗಳು, ಕೂಕನೂರು ಶ್ರೀಗಳು, ಮುದೇನೂರು ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರರು ಭಾಗವಹಿಸಿದ್ದರು.

loading...