ವೀರಶೈವ ಲಿಂಗಾಯತ ಎಂಬ ಪದ ಶಾಶ್ವತ: ಶ್ರೀಗಳು

0
26
loading...

ಇಳಕಲ್ : ಲಿಂಗಾಯತ ಎಂಬ ಪದ ಸುಂಟರಗಾಳಿ ಇದ್ದಂತೆ. ಆಗ ಬಂದಾಗ ಕಣ್ಣು ಮುಚ್ಚಿಕೊಳ್ಳಬೇಕು. ಅದು ಹೋದ ನಂತರ ವೀರಶೈವ ಲಿಂಗಾಯತ ಎಂಬ ಪದ ಶಾಶ್ವತವಗಾಗಿ ಇರುತ್ತದೆ ಎಂದು ಕೇದಾರದ ಜಗದ್ಗುರು ಭೀಮಾಶಂಕರ ಶಿವಾಚಾರ್ಯ ಭಗವತ್ಪಾದಂಗಳವರು ನುಡಿದರು.
ಗುರುವಾರ ನಗರದ ಅನುಭವ ಮಂಟಪದಲ್ಲಿ ಇಳಕಲ್ ತಾಲೂಕು ವೀರಮಾಹೇಶ್ವರ (ಜಂಗಮ) ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವ ಅಂಗವಾಗಿ ನಡೆದ ಸಂಗೀತಯುಕ್ತ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಂತರ ಧರ್ಮಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡುತ್ತಾ ಸಿದ್ದಾಂತ ಶಿಕಾಮಣಿ ನಮ್ಮ ಧರ್ಮಗ್ರಂಥವಾಗಿದೆ. ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತರಿಗೆ ಹಿಂದುಳಿದ ವರ್ಗದ ಸ್ಥಾನಮಾನ ಸಿಗುವಂತೆ ಮಾಡುತ್ತೇವೆ ಎಂದರು.

ಸಮಾನತೆ ಬರಲಿ ಎನ್ನುವ ಉದ್ದೇಶದಿಂದ ಬಸವಣ್ಣನವರ ಬ್ರಾಹ್ಮಣ ಸಮಾಜವನ್ನು ತೊರೆದು ಜಾತವೇದ ಮುನಿಗಳಿಂದ ದೀಕ್ಷೆ ಪಡೆದುಕೊಂಡವರಾಗಿದ್ದಾರೆ. ವೀರಶೈವ -ಲಿಂಗಾಯತ ಪರಂಪರೆ ಸೂರ್ಯ- ಚಂದ್ರ ಇರುವವರೆಗೆ ಅಜರಾಮವಾಗಿರುತ್ತದೆ ಎಂದರು. ಧರ್ಮ ಕಾಪಾಡುವ ಕುರಿತು ಪ್ರತಿಜ್ಞೆ ವಿಧಿ ಭೋದಿಸಿದರು.
ನಂದವಾಡಗಿಯ ಚೆನ್ನಬಸವ ದೇವರು ಮಾತನಾಡಿ, ಜಂಗಮರಿಗೆ ಎಲ್ಲೆಲ್ಲೇದೆ ಬೆಲೆ ಇದೆ. ಅದನ್ನು ಉಳಿಸಿಕೊಳ್ಳಬೇಕಾದರೆ ಆಚಾರವಂತರಾಗಿ ಇರಬೇಕು. ನಮ್ಮಲ್ಲಿ ಆಚಾರ ವಿಚಾರವನ್ನು ತಪ್ಪದೇ ಪಾಲಿಸಿಕೊಂಡು ಬರಬೇಕೆಂದರು.

ಕೊಟೆಕಲ್‍ದ ಅಭಿನವ ನೀಲಕಂಠ ಶಿವಾಚಾರ್ಯರರು ಮಾತನಾಡಿ, ಜಂಗಮ ಜಾತಿಗೆ ಇರುವ ಗೌರವ ಪ್ರಧಾನಮಂತ್ರಿಗೂ ಸಿಗುವುದಿಲ್ಲ. ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಂಗೀತದಿಂದ ಇಷ್ಟಲಿಂಗ ಪೂಜೆಯನ್ನು ಜಗತ್ತಿಗೆ ಕೊಟ್ಟವರೆ ಕೇದಾರ ಜಗದ್ಗುರುಗಳು. ಧರ್ಮಕ್ಕೆ ತಮ್ಮ ಜೀವನವನ್ನು ಕೊಡಲು ಹಿಂದೆ-ಮುಂದೆ ನೋಡಬಾರದು ಎಂದರು.
ತಾಲೂಕು ವೀರಮಾಹೇಶ್ವರ (ಜಂಗಮ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಪೂಜ್ಯರೆಲ್ಲಾ ವೇದ ಪಾಠ ಶಾಲೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿಕೊಂಡರು. ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತನವರು, ಸಿದ್ದನಕೊಳ್ಳದ ಡಾ. ಶಿವಕುಮಾರ ಶ್ರೀಗಳು, ಮರಡಿಮಠದ ಕಾಡಸಿದೇಶ್ವರ ಶಿವಾಚಾರ್ಯರು, ಶೇಖರಯ್ಯ ಸಾರಂಗಮಠ, ಸೇರಿದಂತೆ ಅನೇಕ ಹರಗುರು-ಚರಮೂರ್ತಿಗಳು ವೇದಿಕೆ ಮೇಲೆ ಇದ್ದರು.

ಮಹಾರಾಷ್ಟ್ರದ ನಾಂದೇಡದ ಭಕ್ತರಿಂದ ಪ್ರಾರ್ಥನೆ. ಎಸ್.ವಿ. ಕಂಬಿ ಸ್ವಾಗತಿಸಿದರು. ಡಾ. ವಿ.ಕೆ. ವಂಶಾಕೃಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಕುಮಾರ ನಂದಾಪೂರಮಠ ವಂದಿಸಿದರು. ಶ್ರವಣಾ ಸಿಕ್ಕೇರಿಮಠ, ಗುರುಮಹಾಂತೇಶ ಕಲ್ಮಠ ನಿರೂಪಿಸಿದರು.

loading...