ವೈಶಿಷ್ಠಪೂರ್ಣವಾಗಿ ಜರುಗಿದ ವಾರ್ಷಿಕ ಕಾರ್ಯಕ್ರಮ

0
18
loading...

ಕನ್ನಡಮ್ಮ ಸುದ್ದಿ-ಕಾರವಾರ: ಇಲ್ಲಿನ ಕೋಡಿಬಾಗದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಅತ್ಯಂತ ವೈಶಿಷ್ಠಪೂರ್ಣವಾಗಿ ಆಚರಿಸಲಾಯಿತು.
ನಾಲ್ಕು ದಿನಗಳ ಕಾಲ ವೈವಿಧ್ಯಪೂರ್ಣವಾಗಿ ನಡೆದ ಈ ವಾರ್ಷಿಕೋತ್ಸವದಲ್ಲಿ ಮೊದಲ ದಿನ ಹಳ್ಳಿಹಬ್ಬ ಎಂಬ ವಿನೂತನ ಗ್ರಾಮೀಣ ಸೊಗಡಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದಲ್ಲಿರುವಂತೆ ಕಾಲೇಜಿನ ಆವರಣವನ್ನು ಶೃಂಗರಿಸಿ, ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ದಿನ ಆಯೋಜಿಸಿದ್ದ ಸಂದರ್ಭದಲ್ಲಿ ಅಪ್ಪಟ ಭಾರತೀಯ ಶೈಲಿಯ ಉಡುಗೆ ತೊಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳು ಮಿಂಚಿದರು.

ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆಯನ್ನು ಸಹ ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಈ ಅಂತರಕಾಲೇಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ 9 ತಂಡಗಳು ಭಾಗವಹಿಸಿದ್ದವು. ಬೆಂಕಿ ಇಲ್ಲದೆಯೂ ವಿದ್ಯಾರ್ಥಿಗಳು ಸುಮಾರು 20 ಕ್ಕು ಹೆಚ್ಚು ಅಧಿಕ ವಿವಿಧ ರುಚಿಯ ಖಾದ್ಯಗಳನ್ನು ತಯಾರಿಸಿ ಗಮನಸೆಳೆದರು. ಮೊಸರು ಅವಲಕ್ಕಿ, ಮಜ್ಜಿಗೆ, ಶ್ರೀಖಂಡ, ಸಲಾಡ್, ಮಂಡಕ್ಕಿ, ಕಾಜು ಚಿಕ್ಕಿ ಸೇರಿಂದತೆ ವಿವಿಧ ಬಗೆಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರುರಿಸಿದವು.
ಈ ಸ್ಪರ್ಧೆಯಲ್ಲಿ ಮರೈನ್ ಕುಕೀಸ್ ಪ್ರಥಮ, ಹೆಲ್ತ್ ಎಂಡ್ ಟೇಸ್ಟಿ ದ್ವಿತೀಯ ಹಾಗೂ ಫ್ರೆಂಡ್ಲಿ ತಂಡ ತೃತೀಯ ಬಹುಮಾನ ಪಡೆಯಿತು. ವಿಜೇತರಿಗೆ ಟ್ರೋಫಿ, ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

loading...