ವ್ಯವಹಾರಿಕ ಜ್ಞಾನ ಬೆಳೆಸಲು ಮಕ್ಕಳ ಸಂತೆ

0
7
loading...

ನರಗುಂದ: ಚಾಣಕ್ಕ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮೂಡಿಸಲು ಮಕ್ಕಳ ಸಂತೆಯನ್ನು ಪುರಸಭೆ ಆವರಣದಲ್ಲಿ ರವಿವಾರ ಏರ್ಪಡಿಸಲಾಗಿತ್ತು. ವಿವಿಧ ಬಗೆಯ ತರಕಾರಿ ಮತ್ತು ತಿಂಡಿಗಳ ಮಾರಾಟ ಮತ್ತು ಬೇಳೆಕಾಳು ಹಾಗೂ ತಂಪುಪಾನಿಯ ಮಾರಾಟದ ವ್ಯವಹಾರಿಕ ಜ್ಞಾನ ಮಕ್ಕಳು ಪಡೆದುಕೊಳ್ಳಲು ಸಂತೆಯನ್ನು ನಡೆಸಲಾಯಿತು.
ವಿಶೇಷವಾಗಿ ತರಬೇತಿಯಲ್ಲಿ ಭಾಗಿಯಾಗಿದ್ದ ಎಲ್ಲ ಮಕ್ಕಳೇ ಸಂತೆಯಲ್ಲಿ ಪಾಲ್ಗೊಂಡು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದು ವಿಶೇಷವಾಗಿತ್ತು. ಪ್ರತಿ ಮಕ್ಕಳು ತಾವು ಮಾರಾಟಕ್ಕಿಟ್ಟಿದ್ದ ವಸ್ತುಗಳನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ಒತ್ತಾಯಿಸುತ್ತಿರುವುದು ಕಂಡಿತು.
1 ರಿಂದ 9 ನೇ ವರ್ಗದ ಅನೇಕ ಸಂಖ್ಯೆಯ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ಭಾಗಿಯಾಗಿದ್ದರು. ಚಾಣಕ್ಯ ಮಕ್ಕಳ ಶಿಬಿರದ ನೇತ್ರತ್ವವಹಿಸಿದ್ದ ಸಂತೋಷ ಮರಕಲ್‌, ಬಾಳಪ್ಪ ನರಗುಂದ, ಶಿವಕಾಂತಗೌಡ ಕೆಂಚನಗೌಡ್ರ ಹಾಗೂ ಮಕ್ಕಳ ಪಾಲಕರು ಮಕ್ಕಳ ಸಂತೆಯಲ್ಲಿ ಉಪಸ್ಥಿತರಿದ್ದರು.

loading...