ಶಾಂತಿಯುತ ಚುನಾವಣೆಗಾಗಿ ರೌಡಿ ಶೀಟರಗಳಿಗೆ ಡಿವೈಎಸ್ಪಿ ಕ್ಲಾಸ್ ..!

0
17
loading...

ಅಥಣಿ 15: ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳಲ್ಲಿ ಪಾರದರ್ಶಕ ಮತ್ತು ನಿರ್ಭೀತಿಯಿಂದ ಚುನಾವಣೆ ನಡೆಸಲು ಚುನಾವಣಾ ಆಯೋಗ ಬಾರಿ ಬೀಗಿ ಭದ್ರತೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅಥಣಿ ಪೊಲೀಸ ಠಾಣೆಯಲ್ಲಿ ತಾಲೂಕಿನ ಅಥಣಿ,ಐಗಳಿ ಮತ್ತು ಕಾಗವಾಡ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೌಡಿ ಶೀಟರಗಳಿಗೆ ಅಥಣಿ ವಲಯದ ಡಿವೈಎಸ್ಪಿ ರಾಮಗೊಂಡ ಬಸರಗಿ ಕ್ಲಾಸ ತೆಗೆದುಕೊಂಡು ಖಡಕ ಎಚ್ಚರಿಕೆ ನೀಡಿದರು.

ತಾಲೂಕಿನ ಎರಡು ಮತಕ್ಷೇತ್ರಗಳ ಮತಗಳಲ್ಲಿ ಕಟ್ಟೆಚ್ಚರ ವಹಿಸಿರುವ ಕೇಂದ್ರೀಯ ಭದ್ರತಾ ಸಿಬ್ಬಂದಿಗೆ ರೌಡಿಶೀಟರಗಳ ಮುಖಾಮುಖಿ ಎಚ್ಚರಿಕೆ ನೀಡಲಾಯಿತು. ಚುನಾವಣೆಯಲ್ಲಿ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು. ಒಂದು ವೇಳೆ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದು ಕಂಡು ಬಂದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.ಈ ವೇಳೆ ಪಿಎಸೈ ಸುರೇಶ ಬಂಡೆಕುಂಬಳ ಉಪಸ್ಥಿತರಿದ್ದರು.

loading...