ಶಾಸಕರು ನನ್ನನ್ನು ಕಡೆಗಣಿಸುತ್ತಿದ್ದಾರೆ: ಎಲ್.ಎಸ್.ನಾಯ್ಕ

0
16
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಕಾಂಗ್ರೇಸ್‍ನ ನಿಷ್ಠಾವಂತ ಮುಖಂಡರಲ್ಲಿ ಒರ್ವನಾದ ನನಗೆ ಇಂದು ಕಾಂಗ್ರೆಸ್‍ನಲ್ಲಿ ಮೂಲಗುಂಪು ಮಾಡಲಾಗುತ್ತಿದೆ. ಹಾಲಿ ಶಾಸಕರು ನಮ್ಮನ್ನು ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಕಡೆಗಣಿಸುತ್ತಾ ಬಂದಿದ್ದಾರೆ. ಇದಕ್ಕೆ ಕಾರಣ ಎನು ಎನ್ನುವುದನ್ನು ಪಕ್ಷದ ಹೈಕಮಾಂಡ್ ನಮಗೆ ಉತ್ತರ ನೀಡಬೇಕು ಎಂದು ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷ ಎಲ್.ಎಸ್.ನಾಯ್ಕ ತಿಳಿಸಿದರು.
ಅವರು ಗುರುವಾರ ನಗರದ ಡಿಲಕ್ಸ ಹೊಟೇಲನಲ್ಲಿ ಕರೇದ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಶಾಸಕರು ನಮ್ಮನ್ನು ತಮ್ಮ ಉಪಯೋಗಕ್ಕೆ ಮಾತ್ರ ಬಳಸಿಕೊಂಡ ನಂತರ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಮ್ಮನ್ನು ವಿರೋಧಿಗಳ ತರ ಕಾಣುತ್ತಿದ್ದು, ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಂದಿರುವ ಅನುದಾನದಲ್ಲಿ ನಮಗೆ ಒಂದೇ ಒಂದು ಸಣ್ಣ ಕೆಲಸವನ್ನು ಹಾಕಿಸಿಕೊಟ್ಟಿಲ್ಲ. ಶಾಸಕರಿಂದ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣವಿದ್ದರೂ ಕೂಡ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ.ದೇಶಪಾಂಡೆಯವರ ಕೋರಿಕೆ ಮೇರೆಗೆ ಪಕ್ಷದಲ್ಲೇ ಮುಂದುವರೆದಿದ್ದೇನೆ. ಆದರೆ ಈ ರೀತಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿರಲು ಸಾಧ್ಯವಿಲ್ಲ. ಶಾಸಕರು ಮೂಲ ಕಾಂಗ್ರೆಸಿಗರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೇಸ್ ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವ ಕಳೆದಕೊಳ್ಳುವುದು ನಿಶ್ಚಿತ ಎಂದು ತಿಳಿಸಿದರು.

ನಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ಕಾರಣ ಎನು ಎನ್ನುವುದನ್ನು ನಾನು ಇಂದು ಗೋಷ್ಠಿ ಮೂಲಕ ಕಾಂಗ್ರೆಸ್ ಹೈಕಮಾಂಡನ್ನು ಪ್ರಶ್ನಿಸುತ್ತಿದ್ದು ಅವರು ಅದಕ್ಕೆ ಉತ್ತರ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ನಡೆಯನ್ನು ನಾವು ತೋರಿಸುತ್ತೇವೆ ಎಂದು ತಿಳಿಸಿದರು. ಸತೀಶಕುಮಾರ ನಾಯ್ಕ ಹಾಗೂ ಈರಪ್ಪ ನಾಯ್ಕ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...