ಶಾಸಕ ಉಮೇಶ ಕತ್ತಿಯಿಂದ ರೈತರಿಗೆ ಅನ್ಯಾಯ: ಸಿದ್ದರಾಮಯ್ಯ ವಾಗ್ದಾಳಿ

0
37
loading...

ಕನ್ನಡಮ್ಮ ಸುದ್ದಿ- ಹುಕ್ಕೇರಿ : ರೈತರಿಗೆ ಘೋಷನೆೆ ಮಾಡಿದಂತೆ ಪ್ರತಿ ಟನ್‌ಗೆ 3 ಸಾವಿರ ರೂಪಾಯಿ ಕಬ್ಬಿನ ಹಣ ಪಾವತಿಸದ ಸಕ್ಕರೆ ಬೆಲೆ ಕಡಿಮೆಯಾಗಿದೆ ಎಂದು ರೈತರ ಹಣವನ್ನು ಲೂಟಿ ಮಾಡಿ ಈ ಭಾಗದ ರೈತರಿಗೆ ಬಿಜೆಪಿ ಶಾಸಕ ಉಮೇಶ ಕತ್ತಿ ಅನ್ಯಾಯಾ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಕತ್ತಿ ವಿರುದ್ದ ಹರಿಹಾಯ್ದರು.
ಶನಿವಾರ ಪಟ್ಟಣದಲ್ಲಿ ಕಾಂಗ್ರಸ್‌ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಭಾಗದ ರೈತರಿಗೆ ಶಾಸಕ ಕತ್ತಿ ಅವರು ಅನ್ಯಾಯ ಮಾಡಿದ್ದಾರೆ ಕಳೆದ ಐದು ವರುಷದಲ್ಲಿ ಹುಕ್ಕೇರಿ ಮತಕ್ಷೇತ್ರದ ಅಭಿವೃದ್ದಿ ಕೆಲಸದ ಬಗ್ಗೆ ಒಮ್ಮೆಯೂ ನಮ್ಮ ಬಳಿ ಬಾರದೆಯಿರುವ ಶಾಸಕ ಉಮೇಶ ಕತ್ತಿ ಅವರನ್ನು ಈ ಬಾರಿ ಮತದಾರರು ಯಾವುದೆ ಕಾರಣಕ್ಕೂ ಆಯ್ಕೆ ಮಾಡಬಾರದು ಎಂದು ಕ್ಷೇತ್ರದ ಮತದಾರರಿಗೆ ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕತ್ತಿ ರೈತ ವಿರೋದಿ ಎಂದರು.
ಅವರು ಮುಂದೆ ಮಾತನಾಡಿ ಸರಕಾರದಿಂದ ರೈತರಿಗೆ ಪ್ರತಿ ಟನ್‌ಗೆ ನೀಡಿದ ಪ್ರೋತ್ಸಾಹ ಹಣವನ್ನು ರೈತರಿಗೆ ನೀಡಿಲ್ಲ ಇಂತಹ ಶಾಸಕರನ್ನು ಮನೆಗೆ ಕಳುಹಿಸಿ ಈ ಭಾಗದ ನೀರಾವರಿಗೆ ಮತ್ತು ಹುಕ್ಕೇರಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರಕಾರದ ಮೇಲೆ ಒತ್ತಡ ಹಾಕಿ ಈ ಭಾಗದ ರೈತರಿಗೆ ಅನುಕೂಲ ಮಾಡಿದ ಮಾಜಿ ಸಚಿವರಾದ ಎ.ಬಿ.ಪಾಟೀಲ ಅವರನ್ನು ಈ ಬಾರಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಜೈಲಿಗೆ ಹೋಗಿ ಬಂದ ಯಡ್ಡಿಯೂರಪ್ಪ ಅವರು ಮತ್ತು ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರು ಯಾವ ಮುಖ ಇಟ್ಟು ಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್‌ ಮುಖಂಡ ಸಿ.ಎಂ ಇಬ್ರಾಹಿಂ ಮಾತನಾಡಿ ಹಾಲುಮತಸ್ಥರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿನ ರೈತರು ಹೈನುಗಾರಿಕೆ ಸುಧಾರಣೆಯಾಗಿ ಪ್ರತಿ ಲೀಟರ್‌ಗೆ 4 ರೂ ಪ್ರೋತ್ಸಾಹ ಧನವನ್ನು ನೀಡುತ್ತಿದ್ದಾರೆ ಮತ್ತು ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯದ ಮೂಲಕ ಪ್ರತಿಯೊಂದು ಮಕ್ಕಳಿಗೆ ಪೌಷ್ಠಿಕತೆ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಗಳನ್ನು ಹಾಡಿ ಹೋಗಳಿ ಬಿಜೆಪಿ ಅವರಿಗೆ ರಾಜ್ಯವನ್ನು ಲೂಟಿ ಮಾಡುವುದೆ ಚಿಂತೆ ಮತ್ತು ಯಡ್ಡಿಯೂರಪ್ಪ ಅವರಿಗೆ ಶೋಭಾ ಕರಂದ್ಲಾಜೆಯ ಚಿಂತೆ ಎಂದು ಬಿಜೆಪಿ ಅವರನ್ನು ಲೆವಡಿ ಮಾಡಿದರು. ಮಾಜಿ ಸಚಿವ ಹುಕ್ಕೇರಿ ಮತಕ್ಷೇತ್ರದ ಕಾಂಗ್ರೇಸ್‌ ಅಭ್ಯರ್ಥಿ ಎ.ಬಿ.ಪಾಟೀಲ ಮಾತನಾಡಿ ಶಾಸಕ ಉಮೇಶ ಕತ್ತಿ ಅವರು ಹಿರಾ ಶುಗರ್‌ ಸಕ್ಕರೆ ಕಾರ್ಖಾನೆ ಹಾಳು ಮಾಡಿ ತಾವು ಅಭಿವೃದ್ದಿಯಾಘಿದ್ದಾರೆ ಎಂದು ಕತ್ತಿ ಸಹೋದರರ ವಿರುದ್ದ ಆರೋಪಿಸಿ ದಬ್ಬಾಳಿಕೆ ರಾಜಕಾರಣ ನಡೆಯುದಿಲ್ಲ ಈ ಬಾರಿ ಹುಕ್ಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವುದರೊಂದಿಗೆ ಕತ್ತಿ ಸಹೋದರರ ದಬ್ಬಾಳಿಕೆಗೆ ನಾಂದಿ ಹಾಡಬೇಕು ಮತ್ತು ರಾಜ್ಯ ಸರಕಾರದಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ಹುಕ್ಕೇರಿ ಸಂಕೇಶ್ವರ ಪಟ್ಟಣದ ರಸ್ತೆ ಅಭಿವೃದ್ದಿಗೆ ನಗರೋತ್ಥಾನ ಇಲಾಖೆಯಿಂದ ಹಣ ನೀಡಿದೆ ಎಂದರು ಈ ಬಾರಿ ಕಾಂಗ್ರೆಸ್‌ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಶಾಸಕರಾದ ಸತೀಶ ಜಾರಕಿಹೊಳಿ,ವಿಧಾನ ಪರಿಷತ ಸದಸ್ಯರಾದ ವಿವೇಕರಾವ್‌ ಪಾಟೀಲ,ಮುಖಂಡರಾದ ಡಿ.ಟಿ.ಪಾಟೀಲ.ಬಿ.ಆರ್‌ ಸಂಗಪ್ಪಗೋಳ, ನಾಗಪ್ಪ ಕರಜಗಿ, ಶ್ರೀಕಾಂತ ಭೂಶಿ,ಜಯಪ್ರಕಾಶ ನಲವಡೆ,ಸಂಕೇಶ್ವರ ಬ್ಲಾಕ್‌ ಅಧ್ಯಕ್ಷ ಸಂಜಯ ನಷ್ಠಿ,ಅಶೋಕ ಅಂಕಲಗಿ,ರೇಖಾ ಚಿಕ್ಕೋಡಿ,ಮಹೇಶ ಹಟ್ಟಿಹೋಳಿ,ಬಸವರಾಜ ಗಂಗಣ್ಣವರ ಮುಂತಾದವರು ಇದ್ದರು.

loading...