ಶಾಸಕ ಸುನೀಲ ಹೆಗಡೆ ಮತಪತ್ರ ಸಲ್ಲಿಕೆ

0
18
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಭಾಜಪ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ ಹೆಗಡೆ ಗುರುವಾರ ತಮ್ಮ ಮತಪತ್ರ ಸಲ್ಲಿಸಿದರು. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ, ತಮ್ಮ ತಂದೆಯಾದ ಮಾಜಿ ಎಂಎಲ್‍ಸಿ ವ್ಹಿ.ಡಿ. ಹೆಗಡೆ, ಪತ್ನಿ ಸುವರ್ಣಾ ಸುನೀಲ ಹೆಗಡೆ ಜೊತೆಗಿದ್ದರು. ಕ್ಷೇತ್ರ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ನಾಮಪತ್ರ ಸ್ವೀಕರಿಸಿದರು.

ಮೆರವಣಿಗೆ:- ನಾಮಪತ್ರ ಸಲ್ಲಿಕೆಯಾದ ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳ ಪಕ್ಷದ ಮುಖಂಡರು, ಕಾರ್ಯಕರ್ತರು, ಹಳಿಯಾಳ ಪಟ್ಟಣದ ಪ್ರಮುಖರು ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು.
ಬಹಿರಂಗ ಸಭೆ:- ಗ್ರಾಮದೇವಿ ಜಾತ್ರಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅನಂತಕುಮಾರ ಹೆಗಡೆ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ ಬಹುಮತದಿಂದ ಭಾಜಪ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಆಶೀರ್ವದಿಸಲಿದ್ದಾರೆ.

ಅಭ್ಯರ್ಥಿ ಸುನೀಲ ಹೆಗಡೆ ಮಾತನಾಡುತ್ತಾ ಆರ್.ವಿ. ದೇಶಪಾಂಡೆಯವರ ವಿರುದ್ಧ ಮಾತನಾಡಿದರು. ಕಾಳಿನದಿ ನೀರಾವರಿ ಯೋಜನೆ ಮೊದಲಾದ ಹಲವಾರು ಜನಪರ ಯೋಜನೆಗಳು ನನ್ನ ಶಾಸಕತ್ವದ ಅವಧಿಯಲ್ಲಿ ಹಾಗೂ ರಾಜ್ಯದಲ್ಲಿ ಭಾಜಪ-ಜೆಡಿಎಸ್ ಸಂಯುಕ್ತ ಸರ್ಕಾರವಿದ್ದಾಗ ಮಾಡಿದ ಪರಿಕಲ್ಪನೆಗಳು. ಹೊರತು ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕಿನ ಸಮಗ್ರ ವಿಕಾಸಕ್ಕಾಗಿ ದೇಶಪಾಂಡೆಯವರು ದೂರದೃಷ್ಟಿಯ ಯಾವುದೇ ಕಾರ್ಯಗಳನ್ನು ಮಾಡಿಲ್ಲ ಎಂದು ಟೀಕಿಸಿದರು.
ಪಕ್ಷದ ಮೂರೂ ಘಟಕಗಳ ಅಧ್ಯಕ್ಷರಾದ ಶಿವಾಜಿ ನರಸಾನಿ, ಬಸವರಾಜ ಕಲಶೆಟ್ಟಿ, ತುಕಾರಾಮ ಮಾಂಜ್ರೆಕರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಎಸ್.ಎ. ಶೆಟವಣ್ಣವರ, ಗಿರೀಶ ಟೋಸೂರ, ಗಣಪತಿ ಕರಂಜೇಕರ, ಸಂತೋಷ ಘಟಕಾಂಬ್ಳೆ, ಅಪ್ಪು ಚರಂತಿಮಠ, ವಿಜಯಲಕ್ಷ್ಮೀ ಚವ್ಹಾಣ, ರೂಪಾ ಮೇಲಗಿರಿ, ಸಂತಾನ್ ಸಾವಂತ, ವಿ.ಎಂ. ಪಾಟೀಲ ಮೊದಲಾದವರು ವೇದಿಕೆಯಲ್ಲಿದ್ದರು.

loading...