ಶಿವಾಜಿ-ಬಸವೇಶ್ವರರ ತತ್ವ ಅನುಕರಣೆಯಾಗಲಿ: ತಳವಾರ

0
24
loading...

ಕಾಗವಾಡ 17: ಛತ್ರಪತಿ ಶಿವಾಜಿ ಮಹಾರಾಜರಲ್ಲಿರುವ ಸಮಾಜದಲ್ಲಿಯ ಮಹಿಳೆಯರ ಬಗ್ಗೆ ಅಪಾರ ಅಭಿಮಾನ ಮತ್ತು ಜಗಜ್ಯೋತಿ ಬಸವನ್ನವರಲ್ಲಿರುವ ತ್ಯಾಗ ಭಾವನೆಗಳು ಸೇರಿದಂತೆ ಸಾವಿರಾರು ಹಿತೋಪೋದೇಶಗಳಲ್ಲಿಯ ಒಂದೆರಡು ಅಂಶಗಳು ಜೀವನದಲ್ಲಿ ಅಳವಡಿಸಿಕೊಂಡು ನಾವು ಧನ್ಯರಾಗಬೇಕು ಎಂದು ಕಾಗವಾಡ ಪಿಎಸ್‍ಐ ಬಿ.ಎಸ್.ತಳವಾರ್ ಹೇಳಿದರು.

ಶೇಡಬಾಳ ಸ್ಟೇಷನದಲ್ಲಿ ಶಿವ-ಬಸವ ಜಯಂತಿ ಜಂಟಿಯಾಗಿ ಆಚರಿಸಿದರು. ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಪಿಎಸ್.ಐ ಬಿ.ಎಸ್.ತಳವಾರ್ ಮಾತನಾಡಿದರು. ಶೇಡಬಾಳ ರೈಲು ನಿಲ್ದಾನದ ಸ್ಟೇಷನ್ ಮಾಸ್ಟರ್ ಎಮ್.ಎಸ್.ಘಾಟಗೆ ಇವರು ಮಾತನಾಡುವಾಗ ಯುವಕರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನೀವು ಚಲಿಸಬೇಕು. ಶಿವಾಜಿ ಮಹಾರಾಜರಲ್ಲಿರುವ ಧೈರ್ಯ, ಜಗತ್ತಜ್ಯೋತಿ ಬಸವೇಶ್ವರದಲ್ಲಿರುವ ದಯೆ, ಶೃದ್ಧೆ ನೀವು ಅನುಕರಿಸಿರಿ ಎಂದು ಹೇಳಿದರು.
ಮಾಜಿ ಗ್ರಾಪಂ ಸದಸ್ಯ ಸುಕುಮಾರ ಬನ್ನೂರೆ ಇವರಿಂದ ಶಿವಾಜಿ ವೃತ್ತದಲ್ಲಿ ಶಿವ-ಬಸವ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಾಜಿ ಗ್ರಾಪಂ ಸದಸ್ಯರಾದ ಸಂದೀಪ ಸಾಳೂಂಕೆ, ಪ್ರಮೋದ ಖೋತ್, ವಿಠ್ಠಲ್ ಚೋಳಕೆ, ಪೋಪಟ್ ಕನವಾಡೆ, ಲಕ್ಷ್ಮಣ ರಾವಣ, ರಾಮಾ ವೈದು, ಶಿವನೇರಿ ಸಂಘದ ಆಧ್ಯಕ್ಷ ರಾಜು ಚವ್ಹಾನ್, ಉಮೇಶ ಖೊಂದರೆ, ಸಾಗರ ಅವಳೆ, ಸಮೀರ ಅವಳೆ, ಬಂಡು ಘಾಟಗೆ, ಸಂದೇಶ ಅಲಾಸೆ, ಶಿತಲ ಕೋಲೆ, ಸುರೇಶ ಚೋಳಕೆ, ಮಧು ಜಾಧವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಜೆ ಭವ್ಯ ಮೆರವಣಿಗೆ ನೆರವೇರಿತು.

loading...