ಶ್ರೀನಿವಾಸಗೆ ಟಿಕೆಟ್ : ತಹಶೀಲ್ದಾರ್ ಬೆಂಬಲಿಗರಿಂದ ಪ್ರತಿಭಟನೆ

0
17
loading...

ಹಾನಗಲ್ಲ: ಹಾನಗಲ್ಲ ಹಾಲಿ ಶಾಸಕ ಮನೋಹರ ತಹಶೀಲ್ದಾರ್ ಅವರ ಬದಲಾಗಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅವರಿಗೆ ಟಿಕೇಟ್ ನೀಡಲಾಗಿದೆ ಎಂಬ ಸುದ್ದಿ ತಿಳಿಯುತ್ತದ್ದಂತೆ ಹಾನಗಲ್ಲನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ರಸ್ತೆ ಗಿಳಿದು ಕಾಂಗ್ರೆಸ್ ಹೈಕಮಂಡ ವಿರುದ್ಧ ರವಿವಾರ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿಯುತ್ತದ್ದಂತೆ ಹಾನಗಲ್ಲ ಕಾಂಗ್ರೆಸ್ ಕಚೇರಿಗೆ ಜಮೆಗೊಂಡ ಕಾರ್ಯಕರ್ತರು ಇಲ್ಲಿನ ಗಾಂಧಿವೃತ್ತಕ್ಕೆ ಬಂದು ಟೈರ್‍ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಹೈಕಮಾಂಡ ವಿರುದ್ದ ಘೋಷಣೆ ಕೂಗಿದರು.
ತಾ.ಪಂ ಅಧ್ಯಕ್ಷ ಶಿವಬಸಪ್ಪ ಪೂಜಾರ ಮಾತನಾಡಿ, ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೋಹರ ತಹಶೀಲ್ದಾರರಿಗೆ ಟಿಕೇಟ್ ನೀಡಲಾಗುತ್ತದೆ ಕಾರ್ಯ ಕರ್ತರು ಒಗ್ಗಟ್ಟಾಗಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಹೇಳಿ. ಈಗ ಹೈಕಮಾಂಡ ಬೆರೆಯವರ ಹೆಸರನ್ನು ಪ್ರಕಟಮಾಡಿದ್ದು, ತಾಲೂಕಿನ ಜನರಿಗೆ ಮೋಸ ಮಾಡಿದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಹಾಲಿ ಶಾಸಕ ಮನೋಹರ ತಹಶೀಲ್ದಾರರನ್ನು ಬಿಟ್ಟು ಬೇರೆ ಯಾವೊಬ್ಬರಿಗೆ ಟಿಕೇಟ್ ನೀಡಿದ್ದೇ ಆದಲ್ಲಿ ಮಂಗಳವಾರ ಮತ್ತೆ ತಾಲೂಕಿನಾಧ್ಯಂತ ಕಾಂಗ್ರೆಸ್ ಕಾರ್ಯಕರ್ತರು ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಕಚೇರಿಯಲ್ಲಿ ತಿರ್ಮಾನಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಎಲ್ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ಯಲ್ಲಪ್ಪ ಕಲ್ಲೇರ, ನಜೀರ ಗಿರಿಶಿನಕೊಪ್ಪ, ಜಿ.ಎಂ ಮುಲ್ಲಾ, ಮಖಬೂಲಹ್ಮದ ಸರ್ವಿಕೇರಿ, ಅಶೋಕ ಆರೇಗೊಪ್ಪ, ಸಿದ್ದಪ್ಪ ಹಿರಗಪ್ಪನವರ, ದೇವರಾಜ ಹರಿಜನ, ಫ್ರಭು ದೊಡ್ಡಕುರುಬರ, ಖಾದರಮೊಯಿದ್ದೀನ್ ಶೇಖ, ಸಿ.ಎಸ್ ಬಡಿಗೇರ, ಅಣ್ಣಪ್ಪ ಚಾಕಾಪೂರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

loading...