ಸಂಘ ಸಂಸ್ಥೆಗಳು ಸಮಾಜಮುಖಿಯಾಗಿರಲಿ : ಬಂಡಿಮಠ

0
10
loading...

ಕುಕನೂರ : ನಾಡಿನಲ್ಲಿರುವ ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯ ಮಾಡಬೇಕು ಕೇವಲ ಸಂಘ ಸಂಸ್ಥೆಗಳು ಹಣ ಗಳಿಸುವುದೇ ಅದರ ಉದ್ದೇಶವಾಗಬಾರದು ಎಂದು ಕರ್ನಾಟಕ ಧರ್ಮ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಿದ್ದಲಿಂಗಯ್ಯ ಬಂಡಿಮಠ ಹೇಳಿದರು.

ಅವರು ಕುಕನೂರ ಸಮೀಪದ ದ್ಯಾಂಪುರ ಗ್ರಾಮದಲ್ಲಿ ನಡೆದ ಕರ್ನಾಟಕ ಧರ್ಮ ರಕ್ಷಣಾ ವೇದಿಕೆ ತಾಲೂಕ ಘಟಕ ಕುಕನೂರ ಮತ್ತು ದ್ಯಾಂಪುರ ಗ್ರಾಮ ಘಟಕ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಉದಯವಾಗುತ್ತೀರುವುದು ಒಳ್ಳೆಯ ಬೆಳವಣಿಗೆ ಆದರೆ ಅವುಗಳಿಂದ ಸಮಾಜದ ಅಭಿವೃದ್ದಿಗೆ ಪೂರಕವಾದ ಮತ್ತು ಬಡವರ ನೊಂದವರ ಸೇವೆ ನಡೆಯಬೇಕು ಅಂದಾಗ ಮಾತ್ರ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯ ಈ ನಿಟ್ಟಿನಲ್ಲಿ ಕುಕನೂರ ತಾಲೂಕ ಮತ್ತು ದ್ಯಾಂಪುರ ಗ್ರಾಮ ಘಟಕದವರು ಮಾಡುತ್ತೀರುವ ಕಾರ್ಯ ಶ್ಲಾಘನೀಯವಾದ್ದದು ಯಾಕೆಂದರೆ ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಟ ಎಂದರು. ನಂತರ ಮಾತನಾಡಿದ ಕರ್ನಾಟಕ ಧರ್ಮ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ರವಿಚಂದ್ರ ಶಿಂದ್ಯಾ ನಮ್ಮ ತಾಲೂಕ ಘಟಕ ಉತ್ತಮ ಸಮಾಜಮುಖಿ ಕಾರ್ಯ ಮಾಡಲು ಸಿದ್ದವಾಗಿದ್ದು ಇದರಿಂದ ಇನ್ನೂ ಉತ್ತಮ ಕಾರ್ಯ ಮಾಡಲು ಸಮಾಜದ ಎಲ್ಲರ ಸಹಕಾರ ಸಿಕ್ಕಾಗ ಒಂದು ಉತ್ತಮ ಕಾರ್ಯ ನಡೆಯಲು ಸಾಧ್ಯ ಮತ್ತು ಸಂಘ ಸಂಸ್ಥೆಗಳು ಸಮಾಜದ ಒಳಿತಿಗಾಗಿ ಸೇವೆ ಮಾಡುತ್ತವೆ ಅಂಥಹ ಸಂಘ ಸಂಸ್ಥೆಗಳಿಗೆ ದಾನಿಗಳ ಸಹಕಾರ ಅಗತ್ಯ ಎಂದರು, ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ದೇವರು ಮಾತನಾಡಿ ಈ ವೇದಿಕೆಯ ಕಾರ್ಯಕ್ಕೆ ಅಭಿನಂದನೆಗಳು ಯಾಕೆಂದರೆ ರಕ್ತದ ಅವಶ್ಯಕತೆ ತುಂಬಾ ಇದ್ದು ಇಂತಹ ಕಾರ್ಯಗಳಿಗೆ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಸ್ ಡಿ ಬೆನ್ನುರು, ಚೆನ್ನಬಸಯ್ಯ ಗಣಾಚಾರಿ, ಗ್ರಾಮ ಘಟಕ ಅಧ್ಯಕ್ಷ ವಸಂತ ಅಬ್ಬಿಗೇರಿ, ದೀಪಕ ಜಗತಾಪ್, ಬೀಮರೆಡ್ಡಿ ಬಿಡನಾಳ, ಅರ್ಜುನ ರಾವ್ ಜಗತಾಪ್, ಜಗದೀಶ ಮಂಡಲಗೇರಿ, ಆರೋಗ್ಯ ಅದಿಕಾರಿ ಬಸವರೆಡ್ಡಿ, ಡಾ ವಿಜಯಕುಮಾರ, ಮಾರುತಿ, ಮಂಜು ಮಾಲಗಿತ್ತಿ, ಅಂದಪ್ಪ ಮಾಸ್ತರ, ದಿಪಕ್ ಜಗತಾಪ್, ನಾರಯಣಿ ಸವಜಿ, ವಿಜಯಕುಮಾರ, ಮಾಲಿಂಗಯ್ಯ ಶಿರೂರಮಠ ಮತ್ತು ಇತರರು ಇದ್ದರು.

loading...