ಸಂತೋಷ ಜಾರಕಿಹೊಳಿಯಿಂದ ಬಿರುಸಿನ ಪ್ರಚಾರ

0
65
loading...

ಕನ್ನಡಮ್ಮ ಸುದ್ದಿ-ಗೋಕಾಕ: ಗೋಕಾಕ ಮತಕ್ಷೇತ್ರದ ಕಾಂಗ್ರೇಸ್‌ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಅವರ ಪುತ್ರ ಸಂತೋಷ ಜಾರಕಿಹೊಳಿ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಅವರು, ಶುಕ್ರವಾರದಂದು ಗೋಕಾಕ ಮತಕ್ಷೇತ್ರದ ಬೆಣಚಿನಮರ್ಡಿ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ, ರಾಜ್ಯದ ಕಾಂಗ್ರೇಸ್‌ ಸರಕಾರದ ಸಾಧನೆಗಳನ್ನು ಗುರುತಿಸಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೇಸ್‌ ಪಕ್ಷವನ್ನು ಅಧಿಕಾರಕ್ಕೆ ಬರುವಲ್ಲಿ ಮತ ನೀಡುವಂತೆ ಮನವಿ ಮಾಡಿದರು.
ಕಳೆದ 20ವರ್ಷಗಳಿಂದ ನಮ್ಮ ತಂದೆ ಜಾತ್ಯಾತೀತವಾಗಿ ಎಲ್ಲ ಸಮುದಾಯವನ್ನು ಸಮಾನವಾಗಿ ಕಂಡವರು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿದ್ದು ಮತ್ತೊಮ್ಮೆ ತಮ್ಮ ಸೇವೆ ಮಾಡಲು ನಮ್ಮ ತಂದೆಯವರಿಗೆ ಆಶಿರ್ವಧಿಸಿ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಮಾಜಿ ತಾಪಂ ಸದಸ್ಯ ವಿಠ್ಠಲ ಗುಂಡಿ, ಗ್ರಾಪಂ ಸದಸ್ಯ ಲಕ್ಕಪ್ಪ ಮಾಳಗಿ, ಶಿವಾನಂದ ಪೂಜೇರಿ, ನಿಂಗಪ್ಪ ತೋಳಿನವರ,ಮುತ್ತೆಪ್ಪ ಬಿರನಗಡ್ಡಿ, ಸಿದ್ದಪ್ಪ ರಂಗನ್ನವರ, ರಾಯಪ್ಪ ತುರಾಯಿ, ಬಾಳಪ್ಪ ಗಿಡ್ಡನವರ, ಉದ್ದಪ್ಪ ಖಿಲಾರಿ, ಶಿವಲಿಂಗ ವಡ್ಡರ, ಸುನೀಲ ಕೆಂಪನ್ನವರ ಸೇರಿದಂತೆ ನೂರಾರು ಕಾಂಗ್ರೇಸ್‌ ಕಾರ್ಯಕರ್ತರು ಇದ್ದರು.

loading...