ಸಂವಿಧಾನ ಬದಲಾವಣೆ ದಶಕದ ಅಜೆಂಡಾ ಆಗಿದೆ: ಶಾಸಕ ಜಿಗ್ನೇಶ

0
19
loading...

ಕನ್ನಡಮ್ಮ ಸುದ್ದಿ-ಶಿರಸಿ: ಸಂವಿಧಾನ ಬದಲಾವಣೆ ವಿಚಾರ ಸಂಘ ಪರಿವಾರದ ದಶಕದ ಅಜೆಂಡಾ ಆಗಿದೆ. ಸಂಘ ಪರಿವಾರ ಹಾಗೂ ಮೋಹನ ಭಾಗವತ ಅವರ ಮನಸಿನಲ್ಲಿನ ಈ ವಿಚಾರ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬಾಯಲ್ಲಿ ಬಂದಿದೆಯಷ್ಟೆ. ಸಂಘ ಪರಿವಾರ ಹಾಗೂ ಬಿಜೆಪಿ ಚುನಾವಣೆಯಲ್ಲಿ ಆರಿಸಿ ಬಂದರೆ ಲೋಕತಂತ್ರದ ಅವನತಿ ನಿಶ್ಚಿತ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಯಾವುದೇ ರೀತಿಯಲ್ಲಿ ಲಾಭವಾಗದಂತೆ ಮತ ಚಲಾಯಿಸಬೇಕು ಎಂದು ಗುಜರಾತ್‌ ವಡಗಾಂವ್‌ ಶಾಸಕ ಜಿಗ್ನೇಶ ಮೇವಾನಿ ಹೇಳಿದ್ರು.
ಉತ್ತರ ಕನ್ನಡದ ಶಿರಸಿಯಲ್ಲಿ ನಡೆದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿದ ಮೇವಾನಿ, ಸಂವಿಧಾನ ಬದಲಾವಣೆ ಸಂಘ ಪರಿವಾರದ ಗುರಿಯಾಗಿದೆ. ಬಿಜೆಪಿ ದೇಶದ ಎಲ್ಲರಿಗೂ ಮೋಸ ಮಾಡಿದೆ, ಮನೆ, ಬೆಂಬಲ ಬೆಲೆ, ಉದ್ಯೋಗ ವಿಚಾರದಲ್ಲೂ ಅನ್ಯಾಯ ಮಾಡಿದೆ. ಗಾಂಧಿ ಹತ್ಯೆ ಮಾಡಿದ ಚಿಂತನೆಯೇ ಇಂದು ಗೌರಿಯನ್ನೂ ಹತ್ಯೆ ಮಾಡಿದೆ. ಆದರೆ ಗೌರಿ ಹತ್ಯೆ ಸಂಭ್ರಮಿಸುವವರನ್ನೇ ಪ್ರಧಾನಿ ಮೋದಿ ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿಯಿಂದ ದೇಶದ ಯುವಕರಿಗೆ ಉದ್ಯೋಗ ನೀಡಲಾಗಿಲ್ಲ. ಆದರೆ ಸಂಘಪರಿವಾರ, ಎಬಿವಿಪಿಯಲ್ಲಿ ಕೋಟ್ಯಾಂತರ ನಿರುದ್ಯೋಗಿಗಳಿದ್ದು, ಅವರಿಗಾದರೂ ಕೆಲಸ ನೀಡಬಹುದಿತ್ತು ಎಂದು ವ್ಯಂಗ್ಯವಾಡಿದ ಮೇವಾನಿ, ಕರ್ನಾಟಕದ ಚುನಾವಣೆ ಜಾತ್ಯಾತೀತರಿಗೆ ಮಹತ್ವದ್ದಾಗಿದೆ.
ಸಂಘಟನೆ ಪ್ರಮುಖ ಕೆ.ರಮೇಶ ಪ್ರಾಸ್ತಾವಿಕ ಮಾತನಾಡಿ, ಸಾಮಾಜಿಕ, ಆರ್ಥಿಕ, ಧಾರ್ಮಿಕವಾಗಿ ಸಮಾನತೆ ಸಾರುತ್ತಿರುವ ಸಂವಿಧಾನ ಬದಲಾವಣೆ ಮಾಡುವದಾಗಿ ಹೇಳುವುದು ಸರಿಯಲ್ಲ. ದೇಶದಲ್ಲಿ ಮನುವಾದ ತಳವೂರುತ್ತಿರುವುದಕ್ಕೆ ಅನಂತಕುಮಾರ ಹೆಗಡೆ ಹೇಳಿಕೆ ಸ್ಪಷ್ಟ ನಿದರ್ಶನವಾಗಿದೆ ಎಂದರು. ವೇದಿಕೆಯಲ್ಲಿ ಗೌರಿ, ಜಯರಾಮ ಹೆಗಡೆ, ಕೆ.ಎಲ್‌.ಅಶೋಕ, ಸದಾನಂದ ಮೋದಿ ಹಾಗೂ ಇತರರು ಇದ್ದರು. ಕನ್ನೇಶ ನಾಯ್ಕ ಸ್ವಾಗತಿಸಿದರು.

loading...