ಸಂವಿಧಾನ ಸರ್ವಕಾಲಕ್ಕೂ ಅನ್ವಯ: ರೇಣುಕಾ

0
9
loading...

ಬಂಕಾಪುರ : ಡಾ. ಬಿ.ಆರ್.ಅಂಬೇಡ್ಕರ ರವರ 127 ಜನ್ಮ ದಿನೋತ್ಸವದ ಅಂಗವಾಗಿ ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆ ಶಾಬಿರಾಬಿ ಯಲಗಚ್ಚ ಪೂಜೆ ಸಲ್ಲಿಸಿದರು.

ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಮಾತನಾಡಿ ಡಾ. ಅಂಬೇಡ್ಕರ ರವರು ರಚಿಸಿದ ಸಂವಿಧಾನ ಸರ್ವಕಾಲಕ್ಕೂ ಅನ್ವಯಿಸುವಂತಾಗಿದ್ದು ಇದರಿಂದ ಸಾರ್ವಜನಿಕರು ಶಾಂತಿಯಿಂದ ಸಹಬಾಳ್ವೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು.
ವಿರೇಶ ಹಿರೇಮಠ ಉಮೇಶ ಕೊತಂಬ್ರಿ, ಬಿ.ಎಸ್.ಗಿಡ್ಡಣ್ಣವರ, ಮಲ್ಲಮ್ಮ ಹರವಿ, ಪರಶುರಾಮ ಹೆಬ್ಬಾರ, ಬಸಮ್ಮ ಕೊರಕಲ್, ರಾಮಕೃಷ್ಣ ಬಂಕಾಪುರ, ಗಂಗಾಧರ ಸನಕ್ಯಾನವರ, ಬಸವರಾಜ ಗಡಾದ, ನಿಶಿಮಪ್ಪ ಆಲದಕಟ್ಟಿ, ನಿಂಗಪ್ಪ ಹೊಸಮನಿ, ರಾಘವೇಂದ್ರ ಚವ್ಹಾಣ ಸೇರಿದಂತೆ ಮತ್ತಿತರರು ಇದ್ದರು. ಪರಶುರಾಮ ದನೋಜಿ ನಿರೂಪಿಸಿದರು.

loading...