ಸಚಿವ ದೇಶಪಾಂಡೆಯವರ ಪ್ರಯತ್ನ ಶ್ಲಾಘನೀಯ: ಜಾಧವ

0
14
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಸೋಮಾನಿ ವೃತ್ತದ ಬಳಿ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನೆಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಅವಿರತ ಶ್ರಮಿಸಿರುವುದು ಶ್ಲಾಘನೀಯ. ಸಚಿವರಿಗೆ ಈ ಬಗ್ಗೆ ಮನವಿ ನೀಡಿದ ತಕ್ಷಣವೆ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ಧರ್ಮಿಯ ಮತ್ತು ವೀರ ಪುರುಷರ ಪುತ್ತಳಿ ಪ್ರತಿಷ್ಟಾಪಣೆಗೆ ನಿರ್ಣಯವನ್ನು ಕೈಗೊಳ್ಳುವಂತೆ ಸೂಚಿಸಿದ್ದರು.
ಅದರಂತೆ ನಗರ ಸಭೆಯ ಎಲ್ಲ ಸದಸ್ಯರು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದರು. ಆ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗಿ, ಜಿಲ್ಲಾಧಿಕಾರಿಯವರಿಂದ ಡಿ.ಎಮ್.ಎ. ಬೆಂಗಳೂರು ಅವರಿಗೆ ರವಾನೆಯಾಗಿತ್ತು. ಅದಾದ ಬಳಿಕ ಸಚಿವ ದೇಶಪಾಂಡೆಯವರು ಈ ವಿಚಾರವನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಮಂಡಿಸಲು ಎಲ್ಲ ರೀತಿಯ ತಯಾರಿ ಮಾಡಿದ್ದರು. ಆದರೆ ಈ ತಯಾರಿ ನಡೆಸುತ್ತಿರುವಾಗಲೇ, ರಾಜ್ಯ ಚುನಾವಣಾ ಆಯುಕ್ತರು ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದರು. ಅಲ್ಲಿಂದ ನೀತಿ ಸಂಹಿತೆ ಜಾರಿಯಾದ ಕಾರಣ ಕಾನೂತ್ಮಕವಾದ ಅನುಮತಿ ಪಡೆಯಲು ಸಾಧ್ಯವಾಗಿರಲಿಲ್ಲ.

ಛತ್ರಪತಿ ಶಿವಾಜಿ ಮೂರ್ತಿ ವಿಚಾರದಲ್ಲಿ ಪ್ರತಿಷ್ಟಾಪಣೆ ಮಾಡಲಾಗಿಲ್ಲ ಎಂದು ಅನ್ಯತಾ: ಸಚಿವ ದೇಶಪಾಂಡೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಡುತ್ತಿರುವುದು ರಾಜಕೀಯ ಷಡ್ಯಂತ್ರ. ಸಚಿವ ದೇಶಪಾಂಡೆಯವರು ಕ್ಷತ್ರೀಯ ಮರಾಠಾ ಸಮಾಜದ ಪ್ರತಿಯೊಂದು ಕಾರ್ಯಗಳಿಗೂ ವಿಶೇಷವಾದ ಕಾಳಜಿಯಿಂದ ಸಹಕರಿಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿವಾಜಿ ಮೂರ್ತಿ ಪ್ರತಿಷ್ಟಾಪಣೆಯ ವಿಚಾರವನ್ನು ರಾಜಕೀಯವಾಗಿ ಬಳಸುವುದು ರಾಜಕೀಯವಾಗಿ ಶೋಭೆ ತರುವಂತಹದ್ದಲ್ಲ. ಇಂದು ಮೂರ್ತಿ ಪ್ರತಿಷ್ಟಾಪಣೆ ಮಾಡುವುದು ಸುಲಭದ ಕೆಲಸವಲ್ಲ. ಕಾನೂನಾತ್ಮಕವಾಗಿಯೆ ಮಾಡಬೇಕಾಗುತ್ತದೆ. ಆದಾಗ್ಯೂ ಈ ಬಾರಿ ಸಚಿವ ದೇಶಪಾಂಡೆಯವರು ಪ್ರಚಂಡ ಬಹುಮತದಿಂದ ಆರಿಸಿ ಬಂದ ನಂತರದ ಎರಡೆ ಎರಡು ತಿಂಗಳೊಳಗೆ ಶಿವಾಜಿ ಮೂರ್ತಿ ಪ್ರತಿಷ್ಟಾಪಣೆಯಾಗಲಿದೆ ಎಂದು ರಾಮಲಿಂಗ.ಆರ್.ಜಾಧವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...