ಸದಾಶಿವ ವರದಿ ವಿರೋಧಿಸಿದ ಶಾಸಕರಿಗೆ ತಕ್ಕಪಾಠ: ಮರೆಗುದ್ದಿ

0
19
loading...

ಪಾಲಬಾವಿ 02: ಎ.ಜೆ.ಸದಾಶಿವ ಆಯೋಗದ ವರದಿವನ್ನು ವಿರೋಧಿಸುವ ಕುಡಚಿ ಶಾಸಕ ಪಿ.ರಾಜೀವ ಅವರು ಈ ಬಾರಿ ಬಿಜೆಪಿ ಪಕ್ಷದಿಂದ ಕುಡಚಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು ಅವರಿಗೆ ನಮ್ಮ ಸಮುದಾಯದ ಶಕ್ತಿಯನ್ನು ತೊರಿಸಬೇಕಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪರಶುರಾಮ ಮರೆಗುದ್ದಿ ಹೇಳಿದರು.

ಗ್ರಾಮದಲ್ಲಿ ಸೋಮವಾರ ಸಂಜೆ 4ಗಂಟೆಗೆ ಮಾದಾರ ಚನ್ನಯ್ಯ ನಗರದಲ್ಲಿ ಹಮ್ಮಿಕೊಂಡ ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಇವರ ಆಶ್ರಯದಲ್ಲಿ “ಮಾದಿಗರ ಮತಜಾಗೃತಿ ಅಭಿಯಾನ ಬೈಕ್ ರ್ಯಾಲಿ” ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ರಾಜಕೀಯವಾಗಿ ಪ್ರಬಲವಾಗಬೇಕಾದರೆ ನಮ್ಮ ಮಾದಿಗ ಸಮಾಜವನ್ನು ವಿರೋಧಿಸುವ ವ್ಯಕ್ತಿಗಳನ್ನು ದೂರವಿಡಬೇಕು. ಸಾಮಾಜಿಕವಾಗಿ ನ್ಯಾಯದ ಪರವಾಗಿರುವ ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಮಾದಿಗರ ಮತಗಳನ್ನು ಪಡೆದು ಚುನಾಯಿತರಾಗಿ ಸಮಾಜವನ್ನು ಕಡೆಗಣಿಸಿರುವ ಪಿ.ರಾಜೀವ ಅವರಿಗೆ ಕುಡಚಿ ಮತಕ್ಷೇತ್ರದ ಮಾದಿಗರ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮುರಗೇಶ ಕಂಗಣ್ಣವರ, ಜೆಡಿಎಸ್ ಪಕ್ಷದ ಕುಡಚಿ ಮತಕ್ಷೇತ್ರದ ಆಕಾಂಕ್ಷಿ ರಾಜೇಂದ್ರ ಐಹೊಳೆ, ಹನುಮಂತ ಸಿಮೆಕೇರಿ, ಅಜೀತ ಮಾದರ, ಸಂತೋಷ ನಾಟೀಕಾರ, ಸಂಜು ಮಾದರ, ಸಿದ್ದಪ್ಪ ಮಾದರ, ಶಿವಪ್ಪ ಮಾದರ, ಲಕ್ಷ್ಮಣ ಮೇತ್ರಿ, ಸುರೇಶ ಮಾದರ, ಸಂಗಪ್ಪ ಹಿಪ್ಪರಗಿ, ಬಸಪ್ಪ ಬುರಡಿ, ಶ್ರೀಶೈಲ ಕಡಕೋಳ, ಶಿವಪ್ಪ ಮಾದರ, ಕುಮಾರ ತೆಳಗಡೆ, ಅನಿಲ ಈರಗಾರ, ಸಂತೋಷ ಮಾದರ, ರಾಘವೇಂದ್ರ ಮಾದರ, ಮಾರುತಿ ಮಾದರ, ಲಕ್ಷ್ಮಣ ಹಾದಿಮನಿ, ರಾಜು ಗಸ್ತಿ, ಪರಶುರಾಮ ಭಂಡಾರಿ, ಪಪ್ಪು ಮಾದರ, ಚಿದಾನಂದ ಮಾದರ, ಪ್ರಕಾಶ ಮಾದರ, ಲಕ್ಕಪ್ಪ ಮಾದರ ಇದ್ದರು.

loading...