ಸಮಸ್ಯೆ ಪರಿಹರಿಸದ ನಾಯಕರು: ಆಕ್ರೋಶಗೊಂಡ ಮತದಾರರು

0
13
loading...

ಗದಗ: ನಮಗೆ ತುಂಗಭದ್ರ ನದಿಯ ಕುಡಿಯುವ ನೀರು ಇಲ್ಲ, ದಿನದ ಇಪ್ಪತ್ನಾಲ್ಕು ಗಂಟೆಗಳ ನೀರು ಮೊದಲೇ ಇಲ್ಲ, ಗಟಾರು ಸ್ವಚ್ಚ ಮಾಡುತ್ತಿಲ್ಲ, ಕಸ ಎತ್ತುವಳಿಯಾಗದೇ ಬಹು ದಿನಗಳಾದವು ನಾವೇಕೆ ಓಟು ಹಾಕಬೇಕು ಎಂದು ಪ್ರಜ್ಞಾವಂತ ಮತದಾರರು ಆಕ್ರೋಶದಿಂದ ಪ್ರತಿಭಟಿಸಿದ ಘಟನೆ ಬುಧವಾರ ನಗರದಲ್ಲಿ ನಡದಿದೆ.

ಗದಗ ಜವಳಿ ಬಜಾರದ ವಿಠ್ಠಲ ಮಂದಿರದ ಹಿಂದಿನ ಭಾಗ, ಕಾಗದಗೇರಿ ಓಣಿ ಪ್ರದೇಶದಲ್ಲಿ ಗದಗ-ಬೆಟಗೇರಿ ನಗರಸಭೆ ಕುಡಿಯುವ ನೀರು ಪೂರೈಸುತ್ತಿಲ್ಲ. ಇದುವರೆಗೂ ಹಾಗೆ ಹೀಗೆ ಕಳದದ್ದಾಯಿತು ಇದೀಗ ಬೇಸಿಗೆ ದಿನಗಳು ಬಂದಿದ್ದರಿಂದ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ ಎಂದು ಇಲ್ಲಿನ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು.
ವಿಠ್ಠಲ ಮಂದಿರ, ಮಸೀದೆಗಳು ಈ ಭಾಗದಲ್ಲಿದ್ದು ನಿತ್ಯ ದೇವಸ್ಥಾನಕ್ಕೆ ಮಸೀದೆಗೆ ಬರುತ್ತಿದ್ದು ಇಲ್ಲಿ ಸ್ವಚ್ಚತೆ ಇಲ್ಲ, ರಸ್ತೆಗಳು ಒಡೆದು ತೆಗ್ಗು ಬಿದ್ದು ಹಾಳಾಗಿವೆ. ಚರಂಡಿ, ಶೌಚಾಲಯದ ಗಲೀಬು ರಸ್ತೆಗೆ ಬರುವದರಿಂದ ಮಂದಿರ ಮಸೀದೆಗೆ ಹೋಗುವವರ ಹಾಗೂ ಈ ಪ್ರದೇಶದಲ್ಲಿ ಸಂಚರಿಸುವವ ಜನತೆಗೆ-ವಾಹನಗಳಿಗೆ ತೀವ್ರ ಅಡ್ಡಿ ಉಂಟಾಗಿದೆ. ಈ ಬಗ್ಗೆ ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ನಗರಸಭಾ ಸದಸ್ಯರಿಗೆ ಹಲವಾರು ಸಲ ಹೇಳಿಕೊಂಡರೂ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕೆಲಸ ಆಗಿಲ್ಲ ಆದ್ದರಿಂದ ಇಲ್ಲಿನ ಸಮಸ್ಯೆಗಳನ್ನು ಸರಿಪಡಿಸದಿದ್ದಲ್ಲಿ ಇದೀಗ ಚುನಾವಣೆಗೆ ಬಂದಿದ್ದು ತಕ್ಕ ಪಾಠ ಕಲಿಸಲಾಗುವದು ಎಂದು ಪ್ರಜ್ಞಾವಂತ ಮತದಾರರು ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದರು.

loading...