ಸಮಾಜದ ಅಭಿವೃದ್ಧಿಯೇ ನನ್ನ ಉದ್ದೇಶ: ಸವಿತಾ

0
35
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಮಾಜದಲ್ಲಿ ದಿನ ನಿತ್ಯ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವ ಹಾಗೂ ಮಕ್ಕಳ ಮದುವೆ ಮಾಡಬೇಕೆಂಬ ಆಸೆ ಉಳ್ಳ ಪಾಲಕರಿಗೆ ಇದೊಂದು ವೇದಿಕೆ ಮಾಡಲಾಗಿದೆ ಎಂದು ಸವಿತಾ ಗುಡದಹಳ್ಳಿ ಹೇಳಿದರು.
ಅವರು ರವಿವಾರದಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ.ಬಿ.ಆರ್ ಅಂಬೇಡ್ಕರ ಎಸ್ಸಿ ವಧು-ವರರ ಅನ್ವೇಷಣೆ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಧು-ವರರ ಸಮಾವೇಶದಲ್ಲಿ ಮಾತನಾಡಿದರು.
ಹಲವು ವರ್ಷಗಳಿಂದ ಸಮಾಜದ ಅಭಿವೃದ್ಧಿಗೊಸ್ಕರ ಕೆಲಸ ಮಾಡುತ್ತಿದ್ದೆನೆ. ಎಸ್ಸಿ ಸಮಾಜದಲ್ಲಿ ಹೆಚ್ಚು ವಿದ್ಯಾವಂತರಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ ಮದುವೆಯಾಗಲು ಸರಿಯಾದ ಜೋಡಿಗಳು ಸಿಗದೆ ಹಾಗೇ ಉಳಿಯುತ್ತಿದ್ದಾರೆ. ಆದ್ದರಿಂದ ಸಮಾಜದ ಬಾಂಧವರಿಗೆ ಅನೂಕುಲವಾಗಲೆಂದು ವಧು ವರರ ಸಮಾವೇಶವನ್ನು ಹಮ್ಮಿಕೊಂಡಿದ್ದವೆ ಎಂದು ಹೇಳಿದರು.
ಶಿಕ್ಷಕ ಪಿ.ಡಿ ಗಸ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 25ವರ್ಷಗಳಿಂದ ಸಮಾಜದ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿ ಸಮಾಜದ ಭಾಂದವರು ಉನ್ನತ ಶಿಕ್ಷಣ ಪಡೆದು ದೊಡ್ಡ ಮಟ್ಟದಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ವಧು ವರ ಸಿಗದೆ ಮದುವೆ ಆಗುತ್ತಿಲ್ಲ. ಆದ್ದರಿಂದ ಮಕ್ಕಳ ಮದುವೆ ಮಾಡಬೇಕೆಂದು ಆಸೆಯುಳ್ಳ ಪಾಲಕರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಸು ತಜ್ಞ ರಾಚಯ್ಯ ಹುಲ್ಲಕಾಂತಿಮಠ, ಅಧ್ಯಕ್ಷತೆಯನ್ನು ಎಂ.ಎಂ ಕೋಲಕಾರ ವಹಿಸಿದ್ದರು. ರಮೇಶ ರಾಯಪ್ಪಗೋಳ, ಯಲ್ಲಪ್ಪ ಹುಲದಿ ಸೇರಿದಂತೆ ಸಮಾದ ಬಾಂಧವರು ಹಾಜರಿದ್ದರು.

loading...