ಸಮಾಜದ ಜೊತೆ ಬೆರೆಯುವವರು ನಿಜವಾದ ಸ್ವಾಮಿಗಳು: ಶ್ರೀಗಳು

0
20
loading...

ಕನ್ನಡಮ್ಮ ಸುದ್ದಿ-ಮೂಡಲಗಿ: ಸಮಾಜದ ಅಂಕುಡೊಂಕು ಸರಿಪಡಿಸಿ, ಜಾತಿ ಭೇದಗಳನ್ನು ಮಾಡದೆ. ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡುತ್ತ ಸಮಾಜದ ಜೊತೆ ಬೆರೆಯುವವನು ನಿಜವಾದ ಸ್ವಾಮಿ ಎಂದು ಹುಕ್ಕೇರಿ ಗುರು ಶಾಂತೇಶ್ವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀ ಹೇಳಿದರು.
ಅವರು ಸಮೀಪದ ಸುಣಧೋಳಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಜಡಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಶಿವಾನಂದ ಸ್ವಾಮಿಗಳ ದ್ವಾದಶಿ ಪೀಠಾರೋಹಣದ ಅಂಗವಾಗಿ ಶನಿವಾರ ರಾತ್ರಿ ನಡೆದ ದೀಪೋತ್ಸವ ಮತ್ತು ಮಹಿಳಾ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಠಾಧೀಶರಾದವರು ಭಾಷಭಿಮಾನ, ದೇಶಭಿಮಾನ ಬೆಳೆಸಿಕೊಂಡು ಸಮಾಜ ಸುಧಾರಣೆಯ ಕಾರ್ಯ ಮಾಡಬೇಕು. ಇಂತಹ ಕೆಲಸವನ್ನು ಶಿವಾನಂದ ಸ್ವಾಮಿಜೀಗಳು ಮಾಡುತ್ತ ಬಂದಿದ್ದು. ಇವರ ಕಾರ್ಯಗಳು ಶ್ಲಾಘನೀಯ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಮ್ಮ ಸಂಸ್ಸøತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗುತ್ತಿರುವುದು ಬೇಸರದ ವಿಷಯವಾಗಿದೆ. ಪಾಶ್ಚಾತ್ಯ ಪರಂಪರೆ ಬಿಟ್ಟು ನಮ್ಮ ಸಂಸ್ಕøತಿ, ಸಂಸ್ಕಾರವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳುವುದರ ಜೊತೆ ಮಕ್ಕಳಿಗೂ ಕಲಿಸೋಣ. ಶರಣರ ಮಾತುಗಳನ್ನು ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಸಂಪಾದನೆಯಲ್ಲಿ ಅಲ್ಪ ಭಾಗವನ್ನು ದಾನ ಧರ್ಮದ ಕಾರ್ಯಕ್ಕೆ ತೊಡಗಿಸಿಕೊಳ್ಳಿ. ಅಹಾಂಕಾರಕ್ಕೆ ವಿರಾಮ ನೀಡಿದಾಗ ಮನುಷ್ಯ ಆರಾಮವಾಗಿರುತ್ತಾನೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿ ಆಶೀರ್ವಚನ ನೀಡಿ, ಹಿಂದಿನ ಕಾಲದಲ್ಲಿ ಹೆಣ್ಣನ್ನು ತಿರಸ್ಕಾರ ಭಾವದಿಂದ ಕಾಣುತ್ತಿದ್ದರು. ಆದರೆ ಈಗ ಮಹಿಳೆ ಎಲ್ಲ ರಂಗಗಳಲ್ಲಿ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಿವುದರಿಂದ ಪುರುಷನಿಗೆ ಸರಿಸಮಾನಳಾಗಿದ್ದಾಳೆ. ಎಲ್ಲಿ ಮಹಿಳೆಯರನ್ನು ಗೌರವಿಸಿ ಪೂಜಿಸುವರೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಹೇಳಿದರು.

ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜೀ, ಯರಗುದ್ರಿ ಈರಲಿಂಗೇಶ್ವರ ಮಠದ ಶ್ರೀ ಸಿದ್ದಪ್ರಭು ಶಿವಾಚಾರ್ಯ ಸ್ವಾಮಿಜೀ, ಚಿಮ್ಮಡ ವಿರಕ್ತ ಮಠದ ಶ್ರೀ ಪ್ರಭು ಸ್ವಾಮಿಜೀ ಉಪಸ್ಥಿತರಿದ್ದರು. ನಂತರ ಜೆ,ಕೆ ಕಾಡೇಶ ಕುಮಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

loading...