ಸಹಕಾರಿ ಬ್ಯಾಂಕಿನ ಸಾಲಮನ್ನಾ ರೈತರಿಗೆ ಅನುಕೂಲವಾಗಿಲ್ಲ: ಕುಮಾರಸ್ವಾಮಿ

0
18
loading...

ಕನ್ನಡಮ್ಮ ಸುದ್ದಿ-ನರಗುಂದ: ರೈತರು ಸಹಕಾರಿ ಬ್ಯಾಂಕಿನಲ್ಲಿ ಮಾಡಿದ ಸಾಲಮನ್ನಾ ಮಾಡಲು ಸುಮಾರು 18 ನಿರ್ಭಂಧಗಳನ್ನು ಹೇರಿದ ರಾಜ್ಯ ಸರ್ಕಾರ 50 ಸಾವಿರ ರೂ. ಸಾಲಮನ್ನಾ ಮಾಡಿತು. ಆದರೆ ಅನೇಕ ರೈತರು ಮುಂದೆ ಸಹಕಾರಿ ಬ್ಯಾಂಕಿನಲ್ಲಿ ಸಾಲ ದೊರೆಯದೇ ತೊಂದರೆ ಅನುಭವಿಸುವಂತಾಗಿದೆ. ಸಹಕಾರಿ ಬ್ಯಾಂಕುಗಳಿಗೆ ರಾಜ್ಯ ಸರ್ಕಾರ ಪಾವತಿಸಬೇಕಾದ ಇನ್ನೂ 560 ಕೋಟಿ ರೂ ನೀಡಿಲ್ಲ. ಹಿಗಾಗಿ ರಾಜ್ಯದಲ್ಲಿರುವ ಸಹಕಾರಿ ಬ್ಯಾಂಕುಗಳಿಂದ ರೈತರಿಗೆ ಸಾಲ ದೊರೆಯುತಿಲ್ಲವೆಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕೆ ಮಾಡಿದರು.
ನರಗುಂದದಲ್ಲಿ ಕುಮಾರ ಪರ್ವದ ಅಂಗವಾಗಿ ಎ. 10 ರಂದು ಗಾಂಧಿ ವರ್ತುಲದಲ್ಲಿ ಹಮ್ಮಿಕೊಂಡ ಜೆಡಿಎಸ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು. ಸಹಕಾರಿ ಬ್ಯಾಂಕುಗಳು ಹೀಗಾಗಿ ಹಣಕಾಸು ಕೊರತೆಯಿಂದ ಬಳಲುವಂತಾಗಿದೆ. ಸಹಕಾರಿ ಬ್ಯಾಂಕುಗಳ ನಿರ್ಧೆಶಕ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ಜೂನ್‌ದಲ್ಲಿ ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ಬಾಖಿ ಹಣ ಪಾವತಿಸಲಾಗುವುದು ಎಂದು ಹೇಳಿಕೆ ನೀಡುತ್ತಾರೆ. ಮುಂದೆ ಕಾಂಗ್ರೆಸ್‌ ಸರ್ಕಾರ ಬರುತ್ತದೆ ಎಂದು ಸಿದ್ದರಾಮಯ್ಯ ಕನಸು ಕಾನುತಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ರೈತರು ತುಂಬಾ ತೊಂದರೆಯಲ್ಲಿದ್ದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಮನ್ನಾ ಮಾಡಲು ಕೇಂದ್ರ ಆಸಕ್ತಿಹೊಂದಿಲ್ಲ. ಮುಂದಿನ ವಿಧಾನಸಬೆ ಚುನಾವಣೆಯಲ್ಲಿ ರಾಜ್ಯದಲ್ಲಿ 113 ಸ್ಥಾನಗಳನ್ನು ಜೆಡಿಎಸ್‌ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ. ರಾಜ್ಯದ ರೈತರ 51 ಸಾವಿರ ಕೊಟಿ ರೂ ಮನ್ನಾಮಾಡಲಾಗುವುದು. ಕಳಸಾ ಬಂಡೂರಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದನಂತರ ಅನುಷ್ಟಾನಗೊಳ್ಳಲಿದೆ. ನರಗುಂದ ತಾಲೂಕ ನನ್ನ ತಂದೆ ತಾಯಿಯರ ಉರಿದ್ದ ಹಾಗೆ ಇಲ್ಲಿಯ ಜನ ನನಗೆ ಯಾವತ್ತೂ ಬೆಂಬಲ ನೀಡಿದ್ದಾರೆ. ಬರುವ ವಿಧಾನಸಬೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರವುದಂತೂ ಕಂಡಿತ ಎಂದು ತಿಳಿಸಿದರು. ಮಹದಾಯಿ ಯೋಜನೆ ಅನುಷ್ಟಾನಕ್ಕಾಗಿ ನ್ಯಾಯಂಡಳಿಯಲ್ಲಿ ಇದ್ದ ವಿವಾದದ ಕೊನೆ ವಿಚಾರಣೆ ಪೂರ್ಣಗೊಂಡಿದ್ದು ಬರುವ ಅಗಷ್ಟದಲ್ಲಿ ರಾಜ್ಯದ ಪರ ಆದೇಶ ಬರುವುದು ಗ್ಯಾರಂಟಿ ಎಂದು ತಿಳಿಸಿದರು.
ಸ್ವಾಮಿನಾಥನ್‌ ಆಯೊಗ ಕುರಿತು ರಾಜ್ಯ ಸರ್ಕಾರ ಸರಿಯಾಗಿ ಚರ್ಚಿಸದೇ ರೈತರನ್ನು ತೊಂದರೆಗೆ ಸಿಲುಕಿಸಿದೆ. ರೈತರ ಬೆಳೆಗೆ ಯೋಗ್ಯ ದರ ನೀಡಲು ಸಿದ್ದವಿಲ್ಲ. ಕೇಂದ್ರ ಸರ್ಕಾರಕ್ಕೆ ಸ್ವಾಮಿನಾಥನ್‌ ಆಯೋಗ 2006 ರಲ್ಲಿಯೇ ವರದಿ ನೀಡಿದ್ದರೂ ಸಹ ಅದನ್ನು ಸರಿಯಾಗಿ ಕೇಂದ್ರ ಸರ್ಕಾರ ಗಮನಿಸಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದ ಮೇಲೆ ಸ್ವಾಮಿನಾಥನ್‌ ಆಯೊಗದ ವರದಿಯನ್ನುಸಂಪುರ್ಣ ಜಾರಿ ತಂದು ರೈತರ ಎಲ್ಲ ಉತ್ಪನ್‌ಗಳಿಗೆ ಯೋಗ್ಯ ಬೆಲೆ ನೀಡಲಾಗುವುದು. ಕೃಷಿ ನೀತಿ ಬದಲಾವಣೆಯಾಗಬೇಕಿದೆ. ಮಳೆ ಆಧಾರಿತ ಹಾಗೂ ನೀರಿನ ಸಂಪೂರ್ಣತೆ ಮತ್ತು ರೈತರು ಯಾವ ಬೆಳೆ ಬೆಳೆಯಬೇಕೆಂದು ರೈತರಿಗೆ ಎಲ್ಲ ರೀತಿಯ ಮಾಹಿತಿ ಜೊತೆಗೆ ರೈತರಿಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು.
ಕೃಷ್ಣಾ ಮೇಲ್ದಂಡೆ ಯೋಜನೆಗೆ 1962 ರಲ್ಲಿ ಭೂಮಿಪೂಜೆ ನೆರವೇರಿದ ನಂತರದ ದಿನಗಳಲ್ಲಿ ಅದರ ಅಭಿವೃದ್ದಿಗಾಗಿ ಮುಂದಿನ ಸರ್ಕಾರಗಳು ಯಾವ ಕಾರ್ಯರೂಪ ತರದೇ ನಿರ್ಲಕ್ಷಮಾಡಿದ್ದವು. ಮುಂದೆ ದೇವೆಗೌಡರು ಪ್ರಧಾನಿಗಳಾಗಿದ್ದ ಸಂದಂರ್ಭದಲ್ಲಿ 1000 ಕೋಟಿ ರೂ ಅಭಿವೃದ್ದಿಗಾಗಿ ನೀಡಿದ್ದರು. ಆದರೆ ಆಗಿನ ರಾಜ್ಯದ ಆಡಳಿತದ ಸರಿಯಾಗಿ ಅನುದಾನ ವಿನಿಯೋಗಿಸದೇ ನಿರ್ಲಕ್ಷಮಾಡಿತು ಎಂದು ಟೀಕಿಸಿದರು. ಜೆಡಿಎಸ್‌ ರಾಜ್ಯದಲ್ಲಿ ಅಧಿಕಾರ ಪಡೆದ ನಂತರ ಆರೋಗ್ಯ ಯೋಜನೆಯಡಿಯಲ್ಲಿ ತಾಯಿ ಮಗಳ ರಕ್ಷಣೆಗಾಗಿ ಪ್ರತಿ ತಿಂಗಳು 6 ಸಾವಿರ ರೂ ಪ್ರತಿ ಕುಟುಂಬಕ್ಕೆ ನೀಡಲಾಗುವುದು.
70 ವರ್ಷ ಮೇಲ್ಪಟ್ಟ ವೃದ್ದರಿಗೆ ಅವರ ಸಂರಕ್ಷನೆಗಾಗಿ ಪ್ರತಿ ತಿಂಗಳು 5 ಸಾವಿರ ರೂ ನೀಡಲಾಗುವುದು. ಅರಣ್ಯ ಇಲಾಖೆ ಸಸ್ಯ ಸಂರಕ್ಷಣೆ ಕಾರ್ಯ ನಡೆಸುತಿಲ್ಲ. ಜೆಡಿಎಸ್‌ ಅಧಿಕಾರಕ್ಕೆ ಬಂದನಂತರ ನಿರುಧ್ಯೋಗಿ ಯುವಕರಿಗೆ ಉಧ್ಯೋಗ ನೀಡುವ ದೃಷ್ಟಿಯಿಂದ ಹಾಗೂ ಸಸ್ಯ ಸಂರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿ ತಿಂಗಳು 5 ಸಾವಿರ ರೂನೀಡುವ ಮಹತ್ವದ ಯೋಜನೆ ಜಾರಿ ತರಲಾಗುವುದು ಹಾಗೂ ಅರಣ್ಯ ಇಲಾಖೆ ಸಸ್ಯ ಸಂರಕ್ಷಣೆಯ ಕಾರ್ಯಹೊಣೆಯನ್ನು ಹಿಂಪಡೆಯಲಾಗುದು ಎಂದು ತಿಳಿಸಿದರು.
ಪಟ್ಣಣದ ಹೊರಕೇರಿ ಬಡಾವಣೆಯ ಬಡ ದಂಪತಿಗಳ 11 ವರ್ಷದ ಮಗಳಾದ ಆಫ್ರೀನ್‌ ಹುಣಸೀಮರದ ಬ್ರೇನ್‌ ಟ್ಯೂಮರ್‌ದಿಂದ ಬಳಲುತಿದ್ದು ಅವಳ ಆರೋಗ್ಯ ಸಂರಕ್ಷಣೆಗೆ ಸಹಾಯ ಮಾಡುವಂತೆ ದಂಪತಿಗಳು ಕುಮಾರಸ್ವಾಮಿಯವರನ್ನು ಕೋರಿದ್ದರಿಂದ ನಾನು ಹುಬ್ಬಳ್ಳಿಯಲ್ಲಿ ವಾಸಗೊಂಡಿದ್ದು ಮಗುವಿನ ಚಿಕಿತ್ಸೆಗಾಗಿ ವೈದ್ಯರಿಗೆ ತಿಳಿಸುವೆ ನನ್ನನ್ನು ಕಾಣುವಂತೆ ದಂ¥ತಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನವಲಗುಂದ ಶಾಸಕ ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು. ವೇದಿಕೆ ಮೇಲೆ ಚಂದ್ರಗೌಡ ಪಾಟೀಲ, ಗಿರೀಶ ಪಾಟೀಲ, ಮತಕ್ಷೇತ್ರದ ಜೆಡಿಎಸ್‌ ತಾಲೂಕ ಅದ್ಯಕ್ಷ ಆರ್‌.ಎನ್‌. ಪಾಟೀಲ, ಜಗದೀಶ ಬೆಳವಟಗಿ, ಮಲ್ಲಪ್ಪ ಅರೆಬೆಂಚಿ, ಬಿ.ಎಸ್‌. ಉಪ್ಪಾರ, ಜೆಡಿಎಸ್‌ ಮತಕ್ಷೇತ್ರದ ಕಾರ್ಯಾಧ್ಯಕ್ಷ ಎಚ್‌.ಎನ್‌. ಹಳಕಟ್ಟಿ, ಗೂಳಪ್ಪ ಕಡ್ಲಿಕೊಪ್ಪ. ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಲೀಲಾ ಅಗಸನಕೊಪ್ಪ, ಶ್ರಿದೇವಿ ಜೈನರ್‌, ಲಲಿತಾ ಅರಬೆಂಚಿ, ಎಂ.ಎಸ್‌. ಪರ್ವತಗೌಡ್ರ, ಮುದ್ದಣ್ಣ ನವಲಗುಂದ, ಈರನಗೌಡ ಪಾಟೀಲ ಅನೇಕ ಜೆಡಿಎಸ್‌ ಮುಖಂಡರು ಉಪಸ್ಥಿತರಿದ್ದರು. ಆರ್‌.ಬಿ. ಚಿನಿವಾಲರ ನಿರ್ವಹಿಸಿದರು.

loading...