ಸಾಮೂಹಿಕ ವಿವಾಹದಿಂದ ಸಮಾನತೆ ಸಾಧ್ಯ: ಶ್ರೀಗಳು

0
16
loading...

ಯಲಬುರ್ಗಾ: ಇಂತ ಸಾಮೂಹಿಕ ವಿವಾಹಗಳಿಂದ ಎಲ್ಲರಲ್ಲಿಯೂ ಸಮಾನತೆ ಹೆಚ್ಚಿ ಜಾತಿ ಬೇದವನ್ನು ಹೊಗಲಾಡಿಸಲು ಇಂತ ಮದುವೆಗಳು ಸಹಕಾರಿಯಾಗುತ್ತವೆ. ಸಾಮೂಹಿಕ ವಿವಾಹದಿಂದ ಇವತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿದೆ ಎಂದು ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವದಿಸಿದ ಶ್ರೀಗಳು, ಭಾರತೀಯ ಸಂಸ್ಕøತಿಯಲ್ಲಿ ಮದುವೆ ಎನ್ನುವುದು ಮಹತ್ವದ್ದಾಗಿದೆ. ಅದರಲ್ಲಿ ಮಹಿಳೆಗೆ ನಮ್ಮ ಭಾರತೀಯ ಸಂಸ್ಕøತೀಯಲ್ಲಿ ನಾವು ಮಹತ್ವ ಸ್ಥಾನವನ್ನು ನೀಡಿದ್ದೇವೆ. ಅಂತಾ ಹೆಣ್ಣು ನಿಮ್ಮ ಜೀವನದ ಸಂಗಾತಿಯಾಗುತ್ತಿರುವುದರಿಂದ ಆಕೆಯನ್ನು ಪ್ರೀತಿಯಿಂದ ಕಾಣಿ,ಸಂಸಾರ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ್ದಾಗಿದ್ದರಿಂದ ಉತ್ತಮ ಜೀವನದೊಂದಿಗೆ ಅರ್ಥಪೂರ್ಣ ಮನೆಯಲ್ಲಿ ನಡೆದುಕೊಂಡು ಹೋಗುವಂತೆ ಸಲಹೆ ನೀಡಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಸಾಮೂಹಿಕ ವಿವಾಹಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಆಗುವ ಮದುವೆ, ಇಂದಿನ ದುಬಾರಿ ದಿನಾಮಾನದಲ್ಲಿ ಮದುವೆ ಮಾಡುವದು ತುಂಬಾ ಕಷ್ಟಕರ ಕೆಲಸ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಸಾಮೂಹಿಕ ಮದುವೆಗಳು ಬಡವರ ಪಾಲಿಗೆ ತುಂಬಾ ಅನುಕೂಲವಾಗಿರುವದರಿಂದ ಸಾಮೂಹಿಕ ವಿವಾಹದಿಂದ ಆರ್ಥಿಕ ಭಾರ ಕಡಿಮೆಯಾಗುವುದು ಎಂದು ಹೇಳಿದರು.

ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ, ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಬಸವರಾಜ ಉಳ್ಳಾಗಡ್ಡಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರಪ್ಪ ಕಲಬುರ್ಗಿ, ಬಸವಲಿಂಗಪ್ಪ ಕೊತ್ತಲ, ಸುರೇಶಗೌಡ ಶಿವನಗೌಡ, ಉಮೇಶ ಭಿಕ್ಷಾವತಿಮಠ, ಅಯ್ಯನಗೌಡ ಶೀಲವಂತರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...