ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ: ರಾಯರೆಡ್ಡಿ

0
38
loading...

ಯಲಬುರ್ಗಾ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಮರ್ಪಕ 5ವರ್ಷಗಳ ಕಾಲ ಕಾಂಗ್ರೇಸ್ ನೇತೃತ್ವದ ಅಡಳಿತ ನಡೆಸುವಲ್ಲಿ ಹಲವು ಜನಪರ ಯೋಜನೆಗಳ ರೂಪಿಸುವಲ್ಲಿ ನುಡಿದಂತೆ ನಡೆದುಕೊಂಡಿದ್ದು ಜನತೆ ಅಭಿವೃದ್ದಿಗೆ ಹೆಚ್ಚಿನ ಮಾನ್ಯತೆ ನೀಡಲಿದ್ದಾರೆ ಎಂದು ಯಲಬುರ್ಗಾ ವಿಧಾನಸಭಾ ಕಾಂಗ್ರೇಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಹೇಳಿದರು.

ಪಟ್ಟಣದ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ರವಿವಾರ ತಾಲೂಕಿನ ತಾಳಕೇರಿ, ಕಲಭಾವಿ, ಮಾಟಲದಿನ್ನಿ ಸಂಗನಾಳ ಗ್ರಾಮಗಳ ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯಲಬುರ್ಗಾ ತಾಲೂಕಿಗೆ ಅವಶ್ಯವಿರುವ ಕೃಷ್ಣಾ ಬಿ ಸ್ಕೀಂ, 36ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೆರಿದಂತೆ ಇತರ ಯೋಜನೆಗಳ ಸಮರ್ಪಕತೆಗಾಗಿ ಮತ್ತೆ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗುವ ಅವಶ್ಯಕತೆ ಇದ್ದು ಯಲಬುರ್ಗಾ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೇಸ್‍ಗೆ ಜನ ಬೆಂಬಲ ವ್ಯಕ್ತಪಡಿಸಲಿದ್ದಾರೆ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ಅವರಿಂದ ಯಾವ ಅಭಿವೃದ್ದಿ ಕೆಲಸಗಳು ಆಗುವದಿಲ್ಲ. ಇನ್ನೂ ಹಲವು ಗ್ರಾಮಗಳಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಕ್ಕೆ ಮಣಿದು ಪಕ್ಷ ಸೇರ್ಪಡೆ ಬಯಸಿದ್ದು ನಿತ್ಯವು ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.

ಇದೆ ಏಪ್ರೀಲ್ 23ರಂದು ನಾಮಪತ್ರ ಸಲ್ಲಿಸಲಿದ್ದು ಅಂದಿನಿಂದಲೇ ಪಕ್ಷದ ಪ್ರಚಾರ ಕಾರ್ಯ ನಡೆಯಲಿದೆ. ಕಾಂಗ್ರೇಸ್ ಪಕ್ಷ ಜನಪರವಾಗಿ ಇಂದಿಗೂ ದುಡಿಯುತ್ತಾ ಬಂದಿದ್ದು ರಾಜ್ಯದಲ್ಲಿ ಮತ್ತೆ ಜನಾಶಿರ್ವಾದದಿಂದ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ ಮೇಟಿ, ಸಂಗನಾಳ ಗ್ರಾಪಂ ಮಾಜಿ ಅಧ್ಯಕ್ಷೆಯ ಪತಿ ಅಡಿವೆಪ್ಪ ಲಕಲಕಟ್ಟಿ, ಮಂಜುನಾಥ ಮೇಟಿ, ನಿಂಗಪ್ಪ ಮೇಟಿ, ಚಿದಾನಂದಪ್ಪ ಹರಕಂಗಿ ಸೇರಿ ಇತರ ಗ್ರಾಮಗಳ ಬಿಜೆಪಿ ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಪಕ್ಷ ಸೇರ್ಪಡೆಯಲ್ಲಿ ಯಲಬುರ್ಗಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ಹನಮಂತಗೌಡ ಚೆಂಡೂರ, ಬಿಎಂ ಶಿರೂರ, ಬಸವರಾಜ ಪೂಜಾರ, ಗುತ್ತಿಗೆದಾರ ಬಸವರಾಜ ತಾಳಕೇರಿ, ರಾಮಣ್ಣ ಸಾಲಭಾವಿ, ಮಹೇಶ ಹಳ್ಳಿ, ಶರಣಗೌಡ ಪೋಲಿಸ್‍ಪಾಟೀಲ್, ಅಯ್ಯಪ್ಪ ಯಡ್ಡೋಣಿ, ದ್ಯಾಮಪ್ಪಗೌಡ್ರ, ರಾಘವೇಂದ್ರಚಾರ್ ಗುನ್ನಾಳ, ಶಿವನಗೌಡ ದಾನರಡ್ಡಿ, ನಾಗರಾಜ ಕೊಳಜಿ, ಅಪ್ಪಣ್ಣ ಜೋಷಿ, ಸುಧೀರ ಕೊರ್ಲಳ್ಳಿ, ಮಲ್ಲು ಜಕ್ಕಲಿ, ಸಿದ್ದಪ್ಪ ಕಟ್ಟಿಮನಿ, ಮುನಾಫ್ ಮಕಾಂದರ, ಗವಿಸಿದ್ಧಪ್ಪ ಚೋಳಿನ ಸೆರಿದಂತೆ ಇತರರು ಇದ್ದರು.

loading...