ಸಿದ್ದು ಸವದಿ ಮತಯಾಚನೆಗೆ ಚಾಲನೆ

0
21
loading...

ತೇರದಾಳ: ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಶುಕ್ರವಾರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮತಯಾಚನೆಗೆ ಚಾಲನೆ ನೀಡಿದರು.
ಕುಂಬಾರ ಗಲ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಮತಯಾಚನೆಗೆ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ ವಾರ್ಡ್‌ ನಂಬರ 1ರಿಂದ 8ರ ವರೆಗೆ ಮನೆ ಮನೆಗೆ ತೆರಳಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು ಸವದಿ, ಪ್ರಧಾನಿ ಮೋದಿ ಅವರ ಕೈ ಬಲಪಡಿಸುಲು ಮತ್ತು ಕಾಂಗ್ರೆಸ್‌ ದುರಾಡಳಿತವನ್ನು ನಾಶ ಪಡಿಸಲು ಮತದಾರರು ಸಿದ್ಧರಾಗಿದ್ದಾರೆ. ಬಿಜೆಪಿ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಭಾಕರ ಬಾಗಿ, ಮಹಾವೀರ ಕೊಕಟನೂರ, ಸುರೇಶ ರೇನಕೆ, ವಿಜಯಪ್ರಕಾಶ ದಾನಿಗೊಂಡ, ಶಂಕರ ಕುಂಬಾರ, ಅಪ್ಪು ಮಂಗಸೂಳಿ, ಷಣ್ಮುಖ ಗಾಡದಿ, ಸಂತೋಷ ಅಕ್ಕೆನ್ನವರ, ಪ್ರಪುಲ್‌ದಾದಾ ದೇಶಪಾಂಡೆ, ಜಾಕೀರ ಮೋಮಿನ, ಶಿವಪ್ಪ ಖವಾಸಿ, ಶೀತಲ ಬೋಳಗೊಂಡ, ವಿಜಯ ಬಿಜ್ಜರಗಿ, ಸದಾಶಿವ ಹೊಸಮನಿ, ಸಚಿನ ಅವರಾದಿ, ತಿಮ್ಮಣ್ಣ ಗಾಡಿವಡ್ಡರ, ಜಿನ್ನಪ್ಪ ಸವದತ್ತಿ, ಇಸಾಕ ಮೋಮಿನ, ನಾಗಪ್ಪ ಸರಿಕರ, ನಾಗಪ್ಪ ದೊಡಮನಿ, ನಿಂಗಪ್ಪ ಮಾಲಗಾಂವಿ, ರಮೇಶ ಕಿತ್ತೂರ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...