ಸೀಮಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

0
66
loading...

ಧಾರವಾಡ: ದಶಕದಿಂದಲೂ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತಳಾಗಿ ಕೆಲಸ ಮಾಡಿ ಧಾರವಾಡ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ ನನ್ನನ್ನು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದ್ದು ನನಗೆ ನೋವುಂಟು ಮಾಡಿದೆ ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ ವಿಧಾನ ಸಭಾ ಕ್ಷೇತ್ರ 71 ರಲ್ಲಿ ಮೂಲ ಹಾಗೂ ನಿಷ್ಠಾವಂತ ಕಾರ್ಯಕರ್ತರ ಕಡಗಣನೆಯಾಗಿದೆ. ಪಕ್ಷದ ಕಾರ್ಯಕರ್ತರಿಗೂ ನೋವಾಗಿದ್ದು ಅವರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಈ ಬಾರಿ ಚುನಾವಣೆಯಲ್ಲಿ ಜನರು ಉತ್ತಮ ಆಡಳಿತ ನಡೆಸುವ ಹಾಗೂ ಸಾಮಾನ್ಯರಿಗೆ ಮತ ನೀಡುವ ಯೋಚನೆ ಮಾಡಿದ್ದಾರೆ ಹೊರತು ಹೊಡಿ. ಬಡಿ ಕಡಿ ಎನ್ನುವ ಸಂಸ್ಕøತಿ ಅಭ್ಯರ್ಥಿಗಳಿಗೆ ಮತ ಹಾಕುವದಿಲ್ಲ ಆಯ್ಕೆ ಮಾಡುವದಿಲ್ಲ ಎಂದರು.

ಏ.19, 20 ಅಥವಾ 22 ನೇ ತಾರೀಖನೊಳಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ. ಮೂಲ ಕಾರ್ಯಕರ್ತರಿಗೆ ಅನ್ಯಾಯವಾಗಿದ್ದು ಪಕ್ಷದವರಾಗಲಿ ಅಭ್ಯರ್ಥಿಯಾಗಲಿ ಸೌಜನ್ಯಕ್ಕೂ ನಮ್ಮ ಕಾರ್ಯಕರ್ತರನ್ನು ಗಮನಿಸುತ್ತಿಲ್ಲ ನನ್ನೊಂದಿಗೆ ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಕಾರ್ಯಕರ್ತರಿದ್ದು ನಾನು ಈ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ. ನನ್ನ ನಿರ್ಧಾರದಿಂದ ವಾಪಸ್ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸದಲ್ಲಿ ನಾನು ಹಾಗೂ ನನ್ನ ಬೆಂಬಲಿಗರಿದ್ದೇವು. ಆದರೆ, ಟಿಕೆಟ್ ತಪ್ಪಿರುವುದರಿಂದ, ಈಗಾಗಲೇ ಟಿಕೆಟ್ ಪಡೆದಿರುವ ಅಮೃತ ದೇಸಾಯಿ ಅವರು ಚುನಾವಣೆಯಲ್ಲಿ ಗೆದ್ದರೇ, ಸ್ವಂತ ಬಲದ ಮೇಲೆ ಗೆದ್ದರು ಎನ್ನುತ್ತಾರೆ. ಸೋತರೆ ಸೀಮಾ ಮಸೂತಿ ಸೋಲಿಸಿದರು ಎನ್ನುತ್ತಾರೆ. ಈ ಅಪವಾದವನ್ನು ಹೊತ್ತುಕೊಳ್ಳಲು ನಾನು ತಯಾರಿಲ್ಲ. ಪಕ್ಷದ ವರೀಷ್ಠರು ನನಗೆ ಸಂಪರ್ಕ ಮಾಡಿಲ್ಲ ಮಾಡಿದರೂ ಅದಕ್ಕೆ ನಾನು ಸ್ಪಂದನೆ ಮಾಡುವದಿಲ್ಲ ಹೀಗಾಗಿ ಏನೇ ಆಗಲಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುನೀಲ ಗುಡಿ, ಅರವಿಂದ ಏಗನಗೌಡರ, ರವಿ ಎಲಿಗಾರ ಸೇರಿದಂತೆ ಮತ್ತಿತರರಿದ್ದರು.

loading...