ಸುಗ್ಗಿ ಉತ್ಸವ ಸಾಂಸ್ಕøತಿಕ ಮನರಂಜನಾ ಕಾರ್ಯಕ್ರಮ

0
22
loading...

ಕನ್ನಡಮ್ಮ ಸುದ್ದಿ-ಕುಮಟಾ: ಹಾಲಕ್ಕಿಗಳ ಸಂಸ್ಕøತಿಯನ್ನು ಸಾರುವ ಸುಗ್ಗಿ ಹಬ್ಬದ ದಿನದಂದು ಸುಗ್ಗಿ ಉತ್ಸವ ಸಾಂಸ್ಕøತಿಕ ಮನರಂಜನಾ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಈ ಉತ್ಸವ ಪ್ರತಿವರ್ಷ ಇನ್ನೂ ಅದ್ಧೂರಿಯಾಗಿ ಜರುಗಲಿ ಎಂದು ಯುವ ಮುಖಂಡ ರವಿಕುಮಾರ ಮೋಹನ ಶೆಟ್ಟಿ ಶುಭ ಹಾರೈಸಿದರು.
ಅವರು ಸೋಮವಾರ ತಾಲೂಕಿನ ಅಘನಾಶಿನಿಯ ಶ್ರೀ ಹೋಲೆಟ್ರ ಸಾಂಸ್ಕøತಿಕ ಸೇವಾ ಸಂಘ (ರಿ) ಆಯೋಜಿಸಿದ ಅಘನಾಶಿನಿ ಸುಗ್ಗಿ ಉತ್ಸವದ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿ ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಜನಪದ ಪ್ರಶಸ್ತಿ ವಿಜೇತ ಪುರುಷೋತ್ತಮ ಗೌಡ, ನಿರೂಪಕ ಯೋಗೇಶ ಮಿರ್ಜಾನ, ನೃತ್ಯಪಟು ಅಂಕಿತಾ ಹೊಸ್ಕಟ್ಟ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೃಷ್ಣ ಗೌಡ ಹೊನ್ನಾವರ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಮಂಜುನಾಥ ಪಟಗಾರ, ಎಸ್ ಟಿ ಗೌಡ ಹಾಗೂ ಇತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರದಲ್ಲಿ ನಡೆದ ಝೀ ಟಿವಿ ಸರಿಗಮಪ ಖ್ಯಾತಿಯ ಸಪ್ರೀತ್ ಫಲ್ಗುಣ ಹಾಗೂ ಸಂಗಡಿಗರಿಂದ ಅದ್ಧೂರಿ ರಸಮಂಜರಿ ಕಾರ್ಯಕ್ರಮ ನಿಡುಗರ ಗಮನ ಸೆಳೆಯಿತು.

loading...