ಸುಪ್ರೀಂ ಕೋರ್ಟ್‌ ತೀರ್ಪು: ಅಂಬೇಡ್ಕರ್‌ ಸಂಘದಿಂದ ಮನವಿ

0
18
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್‌ ನೀಡಿದ ತೀರ್ಪನ್ನು ಮರುಪರಿಶೀಲಿಸಿಬೇಕೆಂದು ಆಗ್ರಹಿಸಿ, ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಸೇವಾ ಸಂಘ ಬುಧವಾರ ತಾಲ್ಲೂಕು ಆಡಳಿತದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಈ ತೀರ್ಪಿನಿಂದ ಆರೋಪಗೈದ ಆರೋಪಿಯನ್ನು ತಕ್ಷಣ ಬಂಧಿಸಬಾರದು. ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕನಿಷ್ಠ ಡಿವೈಎಸ್‌ಪಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡಸಬೇಕು. ಆರೋಪಿ ಸರ್ಕಾರಿ ನೌಕರನಾಗಿದ್ದರೆ ಸಕ್ಷೇಮ ಪ್ರಾಧಿಕಾರ ಅಥವಾ ಇನ್ನಿತರ ವ್ಯಕ್ತಿಯಾಗಿದ್ದರೆ, ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಅನುಮತಿ ಪಡೆದು ಆರೋಪಿಯನ್ನು ಬಂಧಿಸಬೇಕೆಂದು ತೀರ್ಪಿನಲ್ಲಿ ಹೇಳಲಾಗಿದೆ. ಈ ರೀತಿ ತೀರ್ಪಿನಿಂದ ದಲಿತರಿಗೆ ತುಂಬಾ ಅನ್ಯಾಯ ಮಾಡಿದಂತಾಗಿದೆ. ಇದರಿಂದ ದಲಿತರಿಗೆ ಕಟ್ಟಕಡೆಯ ಸ್ಥಾನದಲ್ಲಿ ನಿಲ್ಲಿಸಿದಂತಾಗುತ್ತದೆ. ಕಾರಣ ಕೋರ್ಟ್‌ ನೀಡಿದ ಆದೇಶದಿಂದ ದಲಿತರ ಮನನೊಂದಿರುತ್ತದೆ. ಈ ತೀರ್ಪನ್ನು ಪುನರ್‌ ಪರಿಶೀಲಿಸುವಂತೆ ಸರ್ಕಾರ ಅರ್ಜಿ ಸಲ್ಲಿಸಿ, ದಲಿತರಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್‌, ಕಾರ್ಯದರ್ಶಿ ಸಂತೋಷ ಪಾಟಣಕರ್‌, ಅಖಿಲ ಕರ್ನಾಟಕ ಬೋವಿವಡ್ಡರ್‌ ಯುವವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಬೋವಿವಡ್ಡರ್‌, ಪ್ರಮುಖರಾದ ಗಣೇಶ ಪಾಟಣಕರ್‌, ಬಂಗಾರಿ ಬೋರ್‌ಕರ್‌, ಗೋಪಾಲ ನೇತ್ರೆಕರ್‌, ಜನಾರ್ಧನ ಪಾಟಣಕರ್‌, ಉದಯ ಉಣಕಲ್‌, ಶ್ಯಾಮಿಲಿ ಪಾಟಣಕರ್‌, ಸತೀಶ ಪಾಟಣಕರ್‌ ಮುಂತಾದವರಿದ್ದರು.

loading...