ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ

0
16
loading...

 

ಕನ್ನಡಮ್ಮ ಸುದ್ದಿ-ಖಾನಾಪುರ: ಕಳೆದ ಮಾ.20ರಂದು ಸುಪ್ರೀಂ ಕೋರ್ಟ್ ಎಸ್.ಸಿ, ಎಸ್.ಟಿ ದೌರ್ಜನ್ಯ ಕಾಯ್ದೆಯನ್ನು ಸಡಿಲಗೊಳಿಸಿ ನೀಡಿದ ಆದೇಶವನ್ನು ವಿರೋಧಿಸಿದ ತಾಲೂಕಿನ ವಿವಿಧ ಎಸ್.ಸಿ, ಎಸ್.ಟಿ ಸಂಘಟನೆಗಳು ಕೂಡಲೇ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿದಾನಬದ್ಧವಾಗಿ ಎಸ್.ಸಿ, ಎಸ್.ಟಿ ಕಾಯ್ದೆಯನ್ನು ಪ್ರಬಲಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದವು.
ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಅಖಿಲ ಭಾರತ ದಲಿತ ಯುವ ಸಂಘಟನೆಯ ತಾಲೂಕು ಅಧ್ಯಕ್ಷ ಎನ್.ಸಿ ತಳವಾರ ಮತ್ತು ಭೀಮಸೇನಾ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲೇಶಿ ಪೋಳ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಳಸಂಚಿನಿಂದಾಗಿ ಎಸ್.ಸಿ, ಎಸ್.ಟಿ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಇದನ್ನು ವಿರೋಧಿಸದೇ ಮೌನ ವಹಿಸಿದೆ. ಇದರಿಂದ ಬಹುಸಂಖ್ಯಾತರಿಂದ ಶೋಷಭೆಗೊಳಗಾಗುವ ಎಸ್.ಸಿ, ಎಸ್.ಟಿ ಬಾಂಧವರಿಗೆ ಅನ್ಯಾಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಎಸ್.ಸಿ, ಎಸ್.ಟಿ ಸಂಘಟನೆಗಳ ಮುಖಂಡರಾದ ಸುಭಾಸ ಚಲವಾದಿ, ಎನ್.ಸಿ ತಳವಾರ, ಮಲ್ಲೇಶಿ ಪೋಳ, ಸಾಗರ ಅಷ್ಟೇಕರ, ನಾರಾಯಣ ಚಲವಾದಿ, ಶರದ ಹೊನ್ನಾಯ್ಕ, ರಾಜು ಕಾಂಬಳೆ, ರೋಹಿತ ಪೋಳ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ಎಸ್.ಸಿ, ಎಸ್.ಟಿ ಬಾಂಧವರು ಇದ್ದರು.

loading...