ಸುಸಂಸ್ಕøತ ಆಡಳಿತ, ನೇತೃತ್ವ ಬಿಜೆಪಿಯಿಂದ ಮಾತ್ರ ಸಾಧ್ಯ: ಅನಂತಕುಮಾರ

0
21
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ರಾಷ್ಟ್ರದಲ್ಲಿ ಮಾದರಿ ಮತ್ತು ಸುಸಂಸ್ಕøತ ಆಡಳಿತವನ್ನು ನೀಡುವುದರ ಮೂಲಕ ಪ್ರಧಾನಿ ಮೋಧಿ ವಿಶ್ವದ ಗಮನ ಸೆಳೆದಿದ್ದಾರೆ. ಭವಿಷ್ಯದ ಉನ್ನತಿಯ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದರ ಮೂಲಕ ಅಭಿವೃದ್ಧಿಗೆ ಒಂದು ಹೊಸ ಆಯಾಮವನ್ನು ಕೇಂದ್ರ ಸರಕಾರ ನೀಡಿದೆ. ಸುಸಂಸ್ಕøತ ಆಡಳಿತ ಮತ್ತು ನೇತೃತ್ವ ಬಿಜೆಪಿಯಿಂದ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ಜನಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೆಬೇಕು. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಜನಮನ್ನಣೆಯಿದ್ದು, ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು.

ಅವರು ಗುರುವಾರ ರಾತ್ರಿ ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಭವನದ ಗಾರ್ಡನಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನಾವು-ನೀವೆಲ್ಲ ಕುಶಲೋಪರಿ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೇವಲ ರಸ್ತೆ, ಗಟಾರ ದುರಸ್ತಿ, ಉದ್ಘಾಟನೆ ಮಾಡುವುದೇ ಅಭಿವೃದ್ಧಿಯಲ್ಲ. ಅದು ನಿರಂತರವಾದ ಪ್ರಕ್ರಿಯೆ. ಜನಪ್ರತಿನಿಧಿಯಾದವ ಹೊಸದೃಷ್ಟಿಕೋನದೊಂದಿಗೆ ಭವಿಷ್ಯದ ಕನಸುಗಳನ್ನಿಟ್ಟುಕೊಳ್ಳಬೇಕು. ಸತ್ಯದ ಬಟ್ಟೆಯನ್ನು ಹಾಕಿ ಸುತ್ತುತ್ತಿರುವುದರಿಂದ ಸತ್ಯವು ಬತ್ತಲೆಯಾಗುತ್ತಿದೆ. ಇದರಿಂದ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಪ್ರವಾಸೋಧ್ಯಮ ಅಭಿವೃದ್ಧಿಯೆ ಆಗಿಲ್ಲ. ನಮಗೆ ಪಾಶ್ಚಿಮಾತಿ ಸಂಸ್ಕøತಿಯ ಪ್ರವಾಸೋಧ್ಯಮ ಬೇಡ. ಇಲ್ಲಿಯ ನೆಲದ ಸಂಸ್ಕøತಿಯನ್ನು ಸದೃಡಗೊಳಿಸುವ ಮತ್ತು ಮೆಳೈಸುವ, ಇಲ್ಲಿಯ ಜನರ ಸಂಸ್ಕøತಿ, ಆಚಾರ, ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರವಾಸೋಧ್ಯಮ ಬೆಳೆಯಬೇಕು.
ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ಮಾತನಾಡಿ ಪೊಳ್ಳು ಭರವಸೆಗಳನ್ನು ಕೊಟ್ಟಿರುವುದು ಮತ್ತು ಗುದ್ದಲಿ ಪೂಜೆ ಮಾಡಿ ಜನರನ್ನು ದಿಕ್ಕು ತಪ್ಪಿಸುವುದೆ ದೇಶಪಾಂಡೆಯವರ ಸಾಧನೆಯಾಗಿದೆ. ಸಂವಾದದಲ್ಲಿ ಮಹೇಂದ್ರಕುಮಾರ್, ಪಿರೋಜ್ ಪಿರ್ಜಾದೆ, ರವಿ ನಾಯ್ಕ, ಪ್ರಕಾಶ ಜೈನ್, ರೋಶನ್ ನೇತ್ರಾವಳಿ, ಯು.ಎಸ್.ಪಾಟೀಲ, ಗೋಟಿ, ಶಶಿಕುಮಾರ್, ರೋಹಿತ್ ಗೌರ್, ನಾಗರಾಜ, ಡಾ: ಎಸ್.ಎಲ್.ಕರ್ಕಿ ಮೊದಲಾದವರು ವಿವಿಧ ಪ್ರಶ್ನೆಗಳನ್ನು ಹಾಗೂ ವಿಚಾರಗಳನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಹಾಗೂ ಸುನೀಲ ಹೆಗಡೆಯವರಲ್ಲಿ ಹಂಚಿಕೊಂಡರು. ವೇದಿಕೆಯಲ್ಲಿ ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ, ಹಳಿಯಾಳ ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಬಿ.ಎಚ್.ರಾಠಿ ಉಪಸ್ಥಿತರಿದ್ದರು. ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡ ಗುರು ಮಠಪತಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

loading...