ಸೂರಜ ನಾಯ್ಕಗೆ ಸಮಾಧಾನ ಹೇಳಿದ ಮಧು ಬಂಗಾರಪ್ಪ

0
12
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡ ಬಿಜೆಪಿ ಮುಖಂಡ ಸೂರಜ ನಾಯ್ಕರ ಮನೆಗೆ ಆಗಮಿಸಿದ ಜೆಡಿಎಸ್ ರಾಜ್ಯ ಮುಖಂಡ ಮಧು ಬಂಗಾರಪ್ಪ ಸಮಾಧಾನ ಹೇಳಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸೂರಜ್ ಮತ್ತು ಮಧು ಗುಪ್ತ ಮಾತುಕತೆ ನಡೆಸಿದರು.

ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ ಆರ್ ನಾಯ್ಕ ಮತ್ತು ಮುಖಂಡರು ಮಧು ಬಂಗಾರಪ್ಪ ನೇತೃತ್ವದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪ್ರದೀಪ ನಾಯಕರಿಗೆ ಬೆಂಬಲ ನೀಡುವಂತೆ ಸೂರಜರಲ್ಲಿ ವಿನಂತಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮಧು, “ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಕಡೆಗಣಿಸಿದಾಗ ನೋವಾಗುವುದು ಸಹಜ. ಸೂರಜ್ ನಾಯ್ಕ ಕುಟುಂಬ ನನಗೆ ಹೊಸತಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಕಾಲದಿಂದಲೂ ಸೂರಜ್ ಕುಟುಂಬದೊಂದಿಗೆ ನಮಗೆ ಗಾಢ ಸ್ನೇಹವಿದೆ. ಜೆಡಿಎಸ್ ಸೇರ್ಪಡೆಯಾಗಲು ಸೂರಜರಿಗೆ ಆಹ್ವಾನಿಸಿದ್ದೇನೆ. ನಮ್ಮ ಪಕ್ಷದ ಅಭ್ಯರ್ಥಿ ಪ್ರದೀಪ್ ನಾಯಕರಿಗೆ ಬೆಂಬಲ ಸೂಚಿಸುವ ಸಂಬಂಧ ಅವರ ಜತೆಗೆ ಮಾತನಾಡಿ, ಒಳ್ಳೆಯ ನಿರ್ಣಯ ಕೈಗೊಳ್ಳುವಂತೆ ತಿಳಿಸಿz್ದÉೀನೆ” ಎಂದು ಮಧು ತಿಳಿಸಿದರು.

ಸೂರಜ್ ನಾಯ್ಕ ಮಾತನಾಡಿ, “ಬಹಳ ಹಿಂದಿನಿಂದಲೂ ಬಂಗಾರಪ್ಪ ಕುಟುಂಬದೊಂದಿಗೆ ನಮ್ಮ ಗೆಳೆತನವಿದೆ. ಅದೇ ಕಾರಣದಿಂದ ಮಧು ನನಗೆ ಸಾಂತ್ವನ ಹೇಳಲು ಬಂದಿದ್ದಾರೆ” ಎಂದರು.
ಕೊನೆಗೂ ಈ ಇಬ್ಬರು ಸುಂದರ ಯುವ ರಾಜಕಾರಣಿಗಳು ತಮ್ಮ ಗುಪ್ತ ಮಾತುಕತೆಯ ಗುಟ್ಟು ಬಿಟ್ಟು ಕೊಡಲಿಲ್ಲ. ಮುಂದೆ ಸೂರಜ್ ನಿರ್ಧಾರಕ್ಕೆ ಕ್ಷೇತ್ರದ ಯುವಕರು ಕಾಯುತ್ತಿದ್ದಾರೆ. ಈಗಲೇ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ವಿಶ್ಲೇಷಕರ ಗ್ರಹಿಕೆಗೆ ಸಿಗದೆ ಸೂತ್ರವಿಲ್ಲದ ಗಾಳಿಪಟದಂತಾಗಿದ್ದು, ಅಕಸ್ಮಾತ್ ಸೂರಜ್ ಜೆಡಿಎಸ್ಸಿಗೆ ಬೆಂಬಲಿಸಿದರೆ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಅಲ್ಲೋಲಕಲ್ಲೋಲವಾಗಲಿದೆ.

loading...