ಸ್ವಚ್ಛತೆಗೆ ಮೊದಲ ಆದ್ಯತೆ

0
11
loading...

ರಬಕವಿ-ಬನಹಟ್ಟಿ :ರಬಕವಿ-ಬನಹಟ್ಟಿ ಅವಳಿ ನಗರಾದ್ಯಂತ ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಕೊರತೆಗಳಿಗೆ ಕಡಿವಾಣ ಹಾಕಿ ಮೊದಲಿಗೆ ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನಗರಸಭೆಯದ್ದಾಗಿದೆ ಎಂದು ಪೌರಾಯುಕ್ತ ಆರ್.ಎಂ. ಕೊಡಗೆ ತಿಳಿಸಿದರು.
ಇಂದು ರಬಕವಿಯ ನೀರು ಶುದ್ಧೀಕರಣ ಘಟಕದಲ್ಲಿ ಸ್ವಚ್ಛಗೊಳಿಸುವ ಕಾರ್ಯದ ನಂತರ ಮಾತನಾಡಿದ ಅವರು, ಪ್ರತಿ ವರ್ಷಕ್ಕೊಮ್ಮೆಯಾದರೂ ನೀರಿನ ಘಟಕಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ನಗರಾದ್ಯಂತ ಸ್ವಚ್ಛ ನೀರು ಪೂರೈಕೆಯಾಗುವದರ ಜೊತೆಗೆ ಕನಿಷ್ಠ ಶೇ.50 ರಷ್ಟು ರೋಗಗಳನ್ನು ತಡೆಯಲು ಸಾಧ್ಯವೆಂದು ಕೊಡಗೆ ತಿಳಿಸಿದರು.

ಶೀಘ್ರದಲ್ಲಿಯೇ ಬನಹಟ್ಟಿ ನಗರಕ್ಕೆ ಸಂಬಂಧಿಸಿದಂತೆ ನೂತನ ನೀರು ಶುದ್ಧೀಕರಣ ಘಟಕವು ಕಾರ್ಯನಿರ್ವಹಿಸಲಿದೆ. ಸುಮಾರು 18.5 ಕೋಟಿ ರೂ.ಗಳ ಭಾರಿ ವೆಚ್ಚದಲ್ಲಿ ನೂತನ ತಂತ್ರಜ್ಞಾನದೊಂದಿಗೆ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಮುಂದಿನ 50 ವರ್ಷಗಳ ದಿಕ್ಸೂಚಿಯನ್ನಿಟ್ಟುಕೊಂಡು, ನೀರು ಶುದ್ಧೀಕರಣ ಘಟಕವನ್ನು ತಯಾರಿಸಲಾಗುತ್ತಿದೆ ಎಂದರು.
ಕಾರ್ಯ ನಿರ್ವಾಹಕ ಸಹಾಯಕ ಅಭಿಯಂತರ ದಸ್ತಗಿರ ತರಡೆ ಹಾಗು ಎಸ್.ಎಸ್. ಹೇರಲಗಿ ಅಭಿಯಂತರ ವಿ.ಪಿ. ಹಿಪ್ಪರಗಿ, ಪರಕಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...