ಸ್ವಾತಂತ್ರ್ಯ ಯೋಧರಿಗೆ ಬಾಹುಬಲಿ ಸ್ಪೂರ್ತಿ: ನ್ಯಾ. ವೈಗ್ಯಾಣಿ

0
36
loading...

ಕಾಗವಾಡ 05: ಸಾವಿರಾರು ವರ್ಷ ಪೂರ್ವದಲ್ಲಿ ಸ್ವಾತಂತ್ರ್ಯದ ಸ್ಪೂರ್ತಿ ಭರಿಸಲು ಭಗವಾನ್‌ ಬಾಹುಬಲಿ ಇದ್ದರು. ಅವರ ಪ್ರೇರಣೆಯಿಂದ ಜೈನ ಸಮಾಜದ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇತರರಿಗೆ ಸ್ಪೂರ್ತಿ ತುಂಬಿದ್ದಾರೆ ಎಂದು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಾಲಚಂದ್ರ ವೈಗ್ಯಾಣಿ ಹೇಳಿದರು.ಸಾಂಗಲಿಯಲ್ಲಿ ದಕ್ಷಿಣ ಭಾರತ ಜೈನ ಸಭೆ ಮತ್ತು ಜೈನ ಮಹಿಳಾ ಪರಿಷತ್ತಿನ 119 ನೇ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡ ಸಮಾರಂಭದಲ್ಲಿ ¨ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಸಾಂಗಲಿಯ ದಿಗಂಬರ್‌ ಜೈನ ಬೋರ್ಡಿಂಗದಲ್ಲಿ ಪ.ಪೂ 105 ಜಿನಮತಿ ಮಾತಾಜಿ ಇವರ ಹೆಸರಿನಲ್ಲಿ ಕೇಂದ್ರಿಯ ಗ್ರಂಥಾಲಯ ನೂತನ ಕಟ್ಟಡ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ತ್ರಿಲೋಕ ಸಂಶೋಧನ ಹಸ್ತಿನಾಪೂರದ ಆಧ್ಯಕ್ಷ ಪೀಠಾದೀಶ ರವೀಂದ್ರಕೀರ್ತಿ ಮಹಾಸ್ವಾಮಿಗಳ ಹಸ್ತದಿಂದ ಉದ್ಘಾಟಿಸಲಾಯಿತು.

ಸಮಾರಂಭದ ಆಧ್ಯಕ್ಷತೆ ದಕ್ಷಿಣ ಭಾರತ ಜೈನ ಸಭೆ ಆಧ್ಯಕ್ಷ ರಾವಸಾಹೇಬ ಪಾಟೀಲ ವಹಿಸಿದರು. ಪ್ರೋ. ಡಿ. ಎ. ಪಾಟೀಲ ಇವರ ಬರೆದ “ಭಾರತಿಯ ಸ್ವಾತಂತ್ರದಲ್ಲಿ ಜೈನ ಸ್ವಾತಂತ್ರ್ಯ ಯೋಧರ ಯೋಗದಾನ” ಪುಸ್ತಕ, ಪ್ರಥಮಾಚಾರ್ಯ ಪ.ಪೂ 108 ಶಾಂತಿಸಾಗರ ಮಹಾರಾಜ ಇವರ ಸಂಶಿಕ್ತ ಪರಿಚಯಿಸುವ “ಗುರುಗರಿಮಾ” ಗ್ರಂಥದ ಬಿಡುಗಡೆ ಗಣ್ಯರಿಂದ ನೆರವೇರಿತು.ಲಪ.ಪೂ ರವೀಂದ್ರಕಿರ್ತಿ ಸ್ವಾಮಿಜಿ ಮಾತನಾಡುವಾಗ, ದಕ್ಷಿಣ ಭಾರತ ಜೈನ ಸಭೆ ವ್ಯಾಪ್ತಿ ವಿಶಾಲವಾಗಿದೆ. ಸಭೆಯ ಆಧ್ಯಕ್ಷ ರಾವಸಾಹೇಬ ಪಾಟೀಲ ಇವರು ಶಿಕ್ಷಣ, ಆರೋಗ್ಯ, ಧರ್ಮಸಂಸ್ಕಾರ ಇದರಲ್ಲಿ ವಿಶೇಷ ಆಸಕ್ತಿವಹಿಸಿ ಕಾರ್ಯನಿರ್ವಹಿಸುತಿದ್ದಾರೆ. ಇದೊಂದು ಸಮಾಜದ ಪ್ರಗತಿಗೆ ಒಳ್ಳೆಯ ಪ್ರೇರಣೆಯಂದರು.

ಸಮಾರಂಭದಲ್ಲಿ ಸಾಂಗಲಿಯ ಮಾಜಿ ಮಹಾಪೌರ್‌ ಸುರೇಶ ಪಾಟೀಲ, ಪ್ರೋ. ಡಿ. ಎ. ಪಾಟೀಲ, ಚೇರಮನ್‌ ಸಾಗರ ಚೌಗುಲೆ, ಆರ್‌.ಜಿ.ಪಾಟೀಲ, ಸಂಜಯ್‌ ಶೇಟೆ, ಡಿವಿ ನೇಮಣ್ಣವರ್‌, ಡಾ. ಅಜೀತ ಪಾಟೀಲ, ಡಾ. ಮಂಗಲಾ ಭೂಸಾರಿ, ಡಾ. ಅನೀಲ ಮಗದುಮ್ಮ, ಡಾ. ಅನೀಲ ಮಡಕೆ, ಸಿ.ಆರ್‌.ಪಾಟೀಲ, ಸುರೇಂದ್ರ ಚೂಡಾಮಣಿ, ರಾಜಕುಮಾರ ಖಠಾವೆ, ಜೈಪಾಲ್‌ ಚೌಗುಲೆ, ಅನೀತಾ ಪಾಟೀಲ, ಚಾಂದನಿ ಅರವಾಡೆ, ಧನಪಾಲ ಖೋತ್‌, ಅಭಯಕುಮಾರ ಕರೋಲೆ, ಪ್ರಶಾಂತ ಪಾಟೀಲ ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಶ್ರಾವಕ, ಶ್ರಾವಿಕೆಯರು ಪಾಲ್ಗೊಂಡಿದ್ದರು.

loading...