ಹಣವನ್ನು ದುಂದು ವೆಚ್ಚ ಮಾಡಬೇಡಿ: ಅಂಗಡಿ

0
14
loading...

ಸವಣೂರ : ವಿದ್ಯಾರ್ಥಿಗಳು ಹಣವನ್ನು ದುಂದು ವೆಚ್ಚ ಮಾಡದೆ ಹಣವನ್ನು ಕ್ರೋಡಿಕರಿಸಿ ಒಂದು ಪುಸ್ತಕ ಕೊಂಡರೆ ಜೀವನದ ತೀರುಳನ್ನೆ ಬದಲಾಯಿಸುತ್ತದೆ ಎಂದು ಮುಖ್ಯೋಪಾಧಯ ಎ.ಪಿ. ಅಂಗಡಿ ಹೇಳಿದರು.

ತಾಲೂಕಿನ ಯಲವಿಗಿ ಗ್ರಾಮದ (ಪರಮವಾಡಿ) ತಾಂಡಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಡಾ. ಬಿ.ಆರ್. ಅಂಬೇಡ್ಕರ ಅವರ 127 ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರು ಬಾಲ್ಯದಲ್ಲಿದ್ದಾಗ ಸಾಕಷ್ಟು ನೂವುಗಳ ಮಧ್ಯದಲ್ಲಿ ವ್ಯಾಸಂಗ ಕೈಗೊಂಡು ಭಾರತದ ಸಂವಿಧಾನ ಬರೆದರು ಅವರಂತೆ ವಿದ್ಯಾರ್ಥಿಗಳು ಕಠಿಣವಾದ ಅಧ್ಯಯನ ಮಾಡುವದರ ಮೂಲಕ ದೇಶದ ಓಳೆಯ ಪ್ರಜೆಗಳಾಗಿ ಹಾಗೂ ಪಾಲಕರ, ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯುವಂತಾಗಬೇಕು.
ವಿದ್ಯಾರ್ಥಿಗಳು ಜೀವನವನ್ನು ಉತ್ತಮವಾದ ರೀತಿಯಲ್ಲಿ ಜೀವನ ಕೈಗೊಳ್ಳದೆ ಹಲವಾರು ದೃಷ್ಟ ಚಟಗಳಿಗೆ ಬಲಿಯಾಗಿ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಹಲವಾರು ಚಟಾದಿಗಳ ದಾಸರಾಗಿ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಹಣವನ್ನು ಹಾಳು ಮಾಡದೆ ಪುಸ್ತಕಗಳನ್ನು ಕೊಂಡು ವಿದ್ಯಾಭ್ಯಾಸವನ್ನು ಮಾಡಿದಾಗ ಪುಸ್ತಕ ತಮ್ಮ ಜೀವನದ ಬದುಕನ್ನೆ ಬದಲಾವಣೆಯ ಹಾದಿ ತೋರಿಸುತ್ತದೆ ಎಂದರು. ಶಿಕ್ಷಕರಾದ ಎಫ್.ಆರ್.ಹಿರೇಮಠ, ಡಿ.ಎಫ್.ಹರಿಜನ, ರೇಣುಕಾ. ಜಿ, ರೇಖಾ.ಜಿ.ಕೆರೂರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

loading...