ಹಳಿಯಾಳ: ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಸಭೆ

0
28
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಎಚ್.ಡಿ. ಕುಮಾರಸ್ವಾಮಿಯವರು ಜನಸೇವೆಗಾಗಿ ರಾಜಕಾರಣದಲ್ಲಿದ್ದು ಅಲ್ಪಸಂಖ್ಯಾತ ಸಮುದಾಯದವರೂ ಸಹ ಅವರಿಗೆ ಶಕ್ತಿಯಾಗಿ ಚುನಾವಣೆಯಲ್ಲಿ ಸಹಕರಿಸಿದರೆ ಬಡಜನರಿಗೆ, ದೀನದಲಿತರಿಗೆ ರಕ್ಷಣೆ, ಸುರಕ್ಷತೆ ಎಲ್ಲವೂ ಸಿಗಲಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್ ಹೇಳಿದರು.
ಹಳಿಯಾಳ ಪಟ್ಟಣದ ಮಿಲಾಗ್ರಿಸ್ ಸಮುದಾಯಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಪಕ್ಷದ ವಿಧಾನಸಭಾ ಕ್ಷೇತ್ರ ಅಲ್ಪಸಂಖ್ಯಾತ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಇವು ಎರಡೂ ಕೋಮುವಾದಿ ಪಕ್ಷಗಳಾಗಿದ್ದು ಬಿಜೆಪಿಯು ಅಲ್ಪಸಂಖ್ಯಾತರಿಗೆ ಹೆದರಿಸುವ ಕಾರ್ಯ ಮಾಡಿದರೆ ಕಾಂಗ್ರೆಸ್ ಬಿಜೆಪಿಯ ಹೆದರಿಕೆ ತೋರಿಸಿ ಅಲ್ಪಸಂಖ್ಯಾತರ ದುರುಪಯೋಗ ಮಾಡಿಕೊಳ್ಳುತ್ತಿದೆ. ಜೆಡಿಎಸ್ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ ಎಂದರು. ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಮಯವನ್ನು ಉಪಯೋಗಿಸಿ ಕ್ಷೇತ್ರದ ಮತದಾರರನ್ನು ಬಡವರನ್ನಾಗಿಸಿಯೇ ಇಟ್ಟು ತಾವು ಮಾತ್ರ ಶ್ರೀಮಂತರಾಗುತ್ತಿರುವ ರಾಜಕಾರಣಿಗೆ ತಕ್ಕಪಾಠ ಕಲಿಸಿ ಮನೆಗೆ ಕಳುಹಿಸಿ ಎಂದರು.
ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರುಗಳಾದ ಎಂ.ಎಂ. ಶರೀಫ, ಜಬ್ಬಾರ ಕಲಬುರ್ಗಿ, ಪ್ರಧಾನ ಕಾರ್ಯದರ್ಶಿ ಇಮಾಮಹುಸೇನ ಸಮುದ್ರಿ, ದಾಂಡೇಲಿ ನಗರಸಭೆ ಸದಸ್ಯ ರೋಷನ್ ಬಾವಾಜಿ, ಬಿಎಸ್‍ಪಿ ಕ್ಷೇತ್ರಾಧ್ಯಕ್ಷ ಎಂ.ಆರ್. ಮೇಘರಾಜ್ ಸಾಂದರ್ಭಿಕವಾಗಿ ಮಾತನಾಡಿದರು. ಜುಬೇರ ಜುಕಾಕೊ ನಿರೂಪಿಸಿದರು. ವೇದಿಕೆಯ ಮೇಲೆ ಹಳಿಯಾಳ ತಾಲೂಕಾಧ್ಯಕ್ಷ ಸುಭಾಸ ಗೌಡಾ, ಜೋಯಿಡಾ ತಾಲೂಕಾಧ್ಯಕ್ಷ ಕೃಷ್ಣಾ ದುಗ್ಗಾಣಿ ಹಾಗೂ ಜಮೀಲ ತಂಬೋಲಿ, ಶೆಂಡೇವಾಲೆ, ಬಸರಿಕಟ್ಟಿ, ಇಸ್ಮಾಯಿಲ್ ಪೀರಜಾದೆ, ಮುಂಡಗೋಡ ತಾಲೂಕಾಧ್ಯಕ್ಷ ಅರುಣ ಗೋಂಧಳೆ ಮೊದಲಾದವರಿದ್ದರು.

loading...