ಹಿಂದೂಸ್ತಾನ ಪೆಟ್ರೋಲಿಯಂ ಶೋ ರೂಮ್ ಕಾಮಗಾರಿ ವೀಕ್ಷಣೆ

0
29
loading...

ಅಥಣಿ 14: ಹಿಂದೂಸ್ತಾನ ಪೆಟ್ರೋಲಿಯಂ ಕಾರ್ಪೋರೇಷನ್‍ನ ಸ್ಥಳೀಯ ಶ್ರೀ ಏಜನ್ಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ನವೀಕೃತ ಶೋ ರೂಮ್ ಕಾಮಗಾರಿಯನ್ನು ದಕ್ಷಿಣ ವಿಭಾಗದ ಎಸ್.ಆರ್. ಅಂಬಾಭವಾನಿಕುಮಾರ ಭೇಟಿ ನೀಡಿ ಪರಿಶೀಲಿಸಿದರು.

ಇದೇ ವೇಳೆ ಅಂಬಾಭವಾನಿಕುಮಾರ ಅವರು 5 ಕೆ.ಜಿ ತೂಕವುಳ್ಳ ಅಪ್ಪು ಎಂಬ ನೂತನ ಗ್ಯಾಸ್ ಸಿಲಿಂಡರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಜನರ ಅನುಕೂಲಕ್ಕಾಗಿ ಈ ರೀತಿಯ ಸಿಲಿಂಡರ್‍ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇವುಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು.
ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಜಿ.ಕೆ. ಪಟೇಲ್ ಮಾತನಾಡಿ, ಈಗಾಗಲೇ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರಲ್ಲಿ ಈಗಾಗಲೇ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಗ್ಯಾಸ್ ವಿತರಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಸಾರ್ವಜನಿಕರು ಡಿಜಿಟಲೈಜೆಷನ್‍ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಈ ವೇಳೆ ರಮೇಶ ಭಾಟೆ, ಎಸ್.ಎಸ್. ಹಳದಮಳ, ವಿಕ್ರಾಂತ ಭಾಟೆ, ಹಿಮಾಂಶು ಭಾಟೆ, ಅಶೋಕ ಅಧ್ಯಾಪಕ, ಪಿಂಟು ಝೋಲೆ, ಗಜು ತರಲೆ, ದೀಪಕ ಲೆಂಗಡೆ, ಅಭಿಜೀತ ಕರಮನಾಳಕರ, ಮಲ್ಲೇಶ ಸವದಿ ಇದ್ದರು.

loading...