ಹೆಗಡೆ ಸಂಸ್ಕೃತ, ಕನ್ನಡ ಕ್ಷೇತ್ರದ ಅಪರೂಪದ ವಿದ್ವಾಂಸರು: ಕೆರೇಕೈ

0
21
loading...

ಕನ್ನಡಮ್ಮ ಸುದ್ದಿ-ಶಿರಸಿ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸ್ಥಾನ ಪ್ರೋ. ಎಂ.ಎ.ಹೆಗಡೆ ದಂಟ್ಕಲ್‌ ಅವರಿಗೆ ಸಿಕ್ಕಿದ್ದು ಕನ್ನಡ, ಸಂಸ್ಕೃತ ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ರಾಮಾಯಣ, ಮಹಾಭಾರತ ಪ್ರಜ್ಞೆಗೆ ಸಿಕ್ಕ ಗೌರವ ಎಂದು ಮೇಲುಕೋಟೆ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್‌ ಉಮಾಕಾಂತ ಭಟ್ಟ ಕೆರೇಕೈ ಬಣ್ಣಿಸಿದರು.
ಅವರು ನಗರದ ವಿನಾಯಕ ಸಭಾಂಗಣದಲ್ಲಿ ಕೆರೇಕೈ 60, ದಂಟ್ಕಲ್‌ 70 ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಹಾಗೂ ಸಾಂದರ್ಭಿಕ ಸಹಾಯ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳ್ನು ಆಡಿದರು. ಹೆಗಡೆ ಅವರು ಸಂಸ್ಕೃತ ಹಾಗೂ ಕನ್ನಡ ಕ್ಷೇತ್ರದ ಅಪರೂಪದ ವಿದ್ವಾಂಸರು. ಯಕ್ಷಗಾನದಿಂದ ಪ್ರಭಾವಿತನಾಗಿ ಕನ್ನಡ ಹಾಗೂ ಸಂಸ್ಕೃತದಲ್ಲಿ ಅಧ್ಯಯನಕ್ಕೆ ಮುಂದಾದೆ ಎನ್ನುವ ಅವರು ನಾಡು ಕಂಡ ಅಪರೂಪದಲ್ಲಿ ಅಪರೂಪದ ವಿದ್ವಾಂಸರು. ಇದು ಅವರ ಅರ್ಹತೆ ಸಿಕ್ಕ ಗೌರವವಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ವಿನಾಯಕ ಮುತ್ಮುರ್ಡು ಅವರಿಂದ ಗಾನ ಸಂಜೆ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಮಂಜುನಾಥ ಮೋಟಿನಸರ, ಹಾರ್ಮೋನಿಯಂನಲ್ಲಿ ನೀತಾ ಸಾಗರ್‌, ತಂಬೂರದಲ್ಲಿ ನೈದಿಲೆ ಹೊರಾಲೆ ಪಾಲ್ಗೊಂಡರು. ಬಳಿಕ ಭೀಷ್ಮ ವಿಜಯ ತಾಳಮದ್ದಲೆ ಸಂವಾದ ನಡೆಯಿತು. ಭೀಷ್ಮನಾಗಿ ವಿ.ಉಮಾಕಾಂತ ಭಟ್ಟ ಕೆರೇಕೈ, ಪರಶುರಾಮನಾಗಿ ಪ್ರೊ.ಎಂ.ಎ.ಹೆಗಡೆ ದಂಟ್ಕಲ್‌ ಪಾಲ್ಗೊಂಡರು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ದಂಟ್ಕಲ್‌, ಮದ್ದಲೆಯಲ್ಲಿ ಶ್ರೀಪತಿ ಹೆಗಡೆ ಕಂಚೀಮನೆ ಪಾಲ್ಗೊಂಡರು. ಎಸ್‌.ಕೆ.ಭಾಗವತ್‌ ಸ್ವಾಗತಿಸಿದರು. ಸಂಚಾಲಕ ನಾಗರಾಜ್‌ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು. ಸತೀಶ ಗೋಳಿಕೊಪ್ಪ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ನಿರ್ವಹಿಸಿದರು.

loading...