ಹೆಚ್ಚಿದ ಬಿಸಿಲಿನ ಪ್ರಖರತೆ-ಎಳನೀರಿನ ಬೆಲೆ ಏರಿಕೆ

0
15
loading...

ಮಂಜುನಾಥ ಬಡಿಗೇರ

ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದೆಡೆ ಚುನಾವಣಾ ಕಾವು ಏರತೊಡಗಿದ್ದರೆ, ಬಿಸಿಲು ಕೂಡಾ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡಂತಿದೆ.
ಹಾನಗಲ್ಲ ಅರೆ ಮಲೆನಾಡಿನ ಸೆರೆಗಿನಲ್ಲಿದೆ. ಉತ್ತರ ಕರ್ನಾಟಕ ಪ್ರದೇಶಗಳಂತೆ ಇಲ್ಲಿಯ ಜನತೆಯನ್ನು ಬಿಸಿಲ ಝಳ ಕಾಡುತ್ತಿದೆ.

ಬೆಳಿಗ್ಗೆ 11 ಗಂಟೆಯಾಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಸೂರ್ಯನ ತಾಪಕ್ಕೆ ಮೈ ಸುಟ್ಟ ಅನುಭವವಾಗುತ್ತಿದೆ. ಬಿಸಿಲು ನೆತ್ತಿಗೇರುತ್ತಿದ್ದಂತೆ ವೀಪರಿತ ಸೆಖೆಯಾಗುತ್ತಿದ್ದು, ಅಬ್ಬಾ….. ಏನು ಸೆಖೆ ಎಂದು ಜನ ನೆರಳಿನ ಆಶ್ರಯ ಬಯಸುವಂತಾಗಿದೆ.
ಕಳೇದ 15 ಗಳಿಂದ ವೀಪರಿತ ತಾಪದಿಂದಾಗಿ ಜನತೆ ಕಂಗಾಲಾಗುವಂತಾಗಿದೆ. ಜನತೆ ಬಿಸಿಲ ಝಳದಿಂದ ಸಾವರಿಸಿಕೊಳ್ಳಲು ತಂಪು ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಎಳನೀರು ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಗೆ ಇರುವುದು ಕಂಡು ಬರುತ್ತಿದೆ. ಐಸ್ ಕ್ರೀಂ, ಹಣ್ಣಿನ ಜ್ಯೂಸ್ ಕುಡಿಯುವವರ ಸಂಖ್ಯೆಯೂ ಏರುಮುಖವಾಗುತ್ತಿದೆ.
ಮಾರ್ಚ್ ತಿಂಗಳಾಂತ್ಯದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಿದ್ದು, ಎಪ್ರಿಲ್ ನಲ್ಲಿ ಜನರು ಹೊರಬೀಳದಂತಾಗಿದೆ. ಎಳನೀರಿನ ವ್ಯಾಪಾರದಲ್ಲಿ ತುಸು ಏರಿಕೆ ಕಂಡಿತ್ತು. ಪಟ್ಟಣದ ಪ್ರಮುಖ ವೃತ್ತ, ಮಾರುಕಟ್ಟೆ ಸ್ಥಳದ ಸುತ್ತ ಎಳನೀರು ಮಾರಾಟ ಮಾಡಲಾಗುತಿದೆ. ಹಳ್ಳಿಯಿಂದ ಕೆಲಸಗಳ ನಿಮಿತ್ತ ಪೇಟೆಗೆ ಬಂದ ಜನರು ಎಳನೀರು ಕುಡಿದು ಬಿಸಿಲ ಬೇಗೆಯಿಂದ ಸಾವರಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಬೆಲೆಯಲ್ಲಿ ಏರಿಕೆ: ಬಿಸಿಲ ಝಳ ಹೆಚ್ಚಿದ್ದರಿಂದ ಜನತೆ ಸಾಮಾನ್ಯವಾಗಿ ಎಳನೀರಿನತ್ತ ಮುಖ ಮಾಡಿದ್ದಾರೆ. ಹಾನಗಲ್ಲಗೆ ಸಾಮಾನ್ಯವಾಗಿ ಸುತ್ತಮುತ್ತಲ ಹಳ್ಳಿಗಳ ತೋಟದಿಂದ ಎಳನೀರು ತಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ, ಬೇಡಿಕೆಗೆ ತಕ್ಕಂತೆ ಎಳನೀರು ದೊರಕುತ್ತಿಲ್ಲ. ದಾವಣಗೆರೆಯಿಂದ ನಗರಕ್ಕೆ ಎಳನೀರು ಪೂರೈಕೆಯಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಸಾಮಾನ್ಯವಾಗಿ 25 ರೂ ಇದ್ದ ಬೆಲೆ ಬೇಡಿಕೆ ಹೆಚ್ಚಿದ ಪ್ರಮಾಣ, ಪೂರೈಕೆಯಲ್ಲಿನ ಕೊರತೆಯಿಂದಾಗಿ 30-35 ರೂ ಗೆ ಮಾರಾಟ ಮಾಡಲಾಗುತ್ತಿದೆ. ದರ ಹೆಚ್ಚಾಯಿತ್ತಲ್ಲಪ್ಪ ಎನ್ನುತ್ತಲೇ ಗ್ರಾಹರಕು ಸೆಖೆಯ ತಾತ್ಕಾಲಿಕ ಕಿರಿ ಕಿರಿ ತಪ್ಪಿಸಿಕೊಳ್ಳಲು ಹೆಚ್ಚಿನ ಬೆಲೆ ನೀಡಿ ಎಳನೀರು ಕುಡಿಯುತ್ತಿದ್ದಾರೆ.

ಈ ಮೊದಲು ದಿನಕ್ಕೆ 20ರಿಂದ 30 ಎಳನೀರು ಮಾರಾಟ ಮಾಡುತ್ತಿದೆ. ಇದೀಗ ಬಿಸಿಲ ತಾಪದಿಂದ ಸೆಖೆಯೂ ಹೆಚ್ಚುತ್ತಿರುವ ಕಾರಣದಿಂದ ದಿನಕ್ಕೆ 100 ರಿಂದ 150 ಎಳನೀರು ಮಾರಾಟವಾಗುತ್ತಿದೆ.
ಹಜರತಲಿ ಅತ್ತಾರ, ವ್ಯಾಪಾರಿ

loading...