ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ನೀಡಿ: ಖಾದ್ರಿ

0
19
loading...

ಶಿಗ್ಗಾವಿ : ಹದಿನಾಲ್ಕು ವರ್ಷದ ವನವಾಸ ಮುಗಿಯುವ ಕಾಲ ಬಂದಿದ್ದು ಈ ಬಾರಿ ಒಂದು ಅವಕಾಶ ಕೊಡಿ, ಈಗಾಗಲೇ ಏನು ಅಭಿವೃದ್ದಿ ಮಾಡಿದ್ದೇನೆ ಎಂದು ಬೀಗುತ್ತಿದ್ದಾರೋ ಅವರಿಗಿಂತ ಹೆಚ್ಚಿನ ಕೆಲಸ ಮಾಡಿ ತಮ್ಮ ಸೇವೆ ಮಾಡುತ್ತೇನೆ ಎಂದು ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಎಸ್ ಖಾದ್ರಿ ಹೇಳಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಕಾಂಗ್ರೇಸ್ ಕಾರ್ಯಾಲಯದ ಉದ್ಘಾಟನೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಚುನಾವಣೆ ಕಾಂಗ್ರೇಸ್ ಪಕ್ಷದ ಸವಾಲಿನ ಚುನಾವಣೆ ಈ ಕ್ಷೇತ್ರದ ಗೆಲುವು ಕೆಂಪು ಕೋಟೆಯ ದಿಕ್ಸೂಚಿಯಾಗಲಿದೆ, ಇಲ್ಲಿ ನ್ಯಾಯಕ್ಕಾಗಿ ಕಾಂಗ್ರೇಸ್ ಪಕ್ಷ ಗೆಲ್ಲಬೇಕು ನುಡಿದಂತೆ ನಡೆದ ಏಕೈಕ ಸರಕಾರವೆಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ, ಈ ಸರಕಾರ ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಪರವಾದ ಕಾರ್ಯಕ್ರಮಗಳನ್ನು ಕೊಟ್ಟಿದೆ ಆದ್ದರಿಂದ ರಾಜ್ಯದಲ್ಲಿ ಅಪಾರ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದ್ದು ಮುಖ್ಯಮಂತ್ರಿಗಳು ಮರಳಿ ಸಿದ್ದರಾಮಯ್ಯನವರೆಂದು ವಿಶ್ವಾಸ ಗಟ್ಟಿಗೊಂಡಿದೆ, ಕ್ಷೇತ್ರದಲ್ಲಿ ನಾನು 15 ವರ್ಷಗಳಿಂದ ಕಷ್ಟ, ತೊಂದರೆ, ನೋವು-ನಲಿವುಗಳಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ ಮತ್ತು ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಸಂಘಟನೆ ಗಟ್ಟಿಗೊಳ್ಳಲು ಸಂಘಟನೆಯ ಕಾರ್ಯಕರ್ತರೇ ಕಾರಣೀಕರ್ತರು ಎಲ್ಲ ಶ್ರೇಯಸ್ಸು ಕಾರ್ಯಕರ್ತರಿಗೆ ಸೇರಿದ್ದು ಅವರೇ ನಮ್ಮ ಹೈಕಮಾಂಡ್, ಕ್ಷೇತ್ರದಲ್ಲಿ 237 ಬೂತ್‍ಗಳನ್ನು ಸ್ಥಾಪಿಸಲಾಗಿದೆ ಪ್ರತಿ ಬೂತನ ಅದ್ಯಕ್ಷರು ಮತ್ತು ಪಧಾಧಿಕಾರಿಗಳು ತಂತ್ರಗಾರಿಕೆಯನ್ನು ರೂಪಿಸುವ ಬಿಜೆಪಿ ಪಕ್ಷವನ್ನು ಓಡಿಸಲು ಕಂಕಣ ಬದ್ದರಾಗಬೇಕಿದೆ, ನಮ್ಮ ಸಂಘಟನೆಯಿಂದ ಬಡವರ, ರೈತರ, ಕೂಲಿ ಮಾರ್ಮಿಕರ, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಪರವಾಗಿ ಶ್ರಮಿಸಿದ್ದೇನೆ ಈ ಬಾರಿ ರಾಜ್ಯದಲ್ಲಿ 225 ಕ್ಕೆ 225 ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಜಯಬೇರಿ ಬಾರಿಸುತ್ತದೆ ಎಂದು ಹಲವಾರು ಸಮೀಕ್ಷೆಗಳಿಂದ ವರದಿ ಬಂದಿದೆ ಹಾಗಾಗಿ ಹಿಂದಿನ ತಪ್ಪನ್ನು ಮರುಕಳಿಸದಂತೆ ಹಾಗೂ ಇದು ನನಗೆ ಕೊನೆಯ ಚುನಾವಣೆಯಾಗಿರುವುದರಿಂದ ಪಕ್ಷ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿಧರ ಶೆಟ್ಟಿ, ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಸ್ ಜಿ ಶಿಡೇನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಗೌಡಗೇರಿ, ಎಮ್ ಎನ್ ವೆಂಕೋಜಿ, ನಾಗಪ್ಪ ತಿಪ್ಪಕ್ಕನವರ, ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧನ ಕಾರ್ಯದರ್ಶಿ ಬಿ ಬುಜಂಗಶೆಟ್ಟಿ, ಕಾರ್ಯಾದ್ಯಕ್ಷ ವೀರೇಶ ಆಜೂರ, ಜಿಪಂ ಸದಸ್ಯರಾದ ಬಸವರಾಜ ದೇಸಾಯಿ, ದೀಪಾ ಅತ್ತೀಗೇರಿ, ತಾ ಪಂ ಅದ್ಯಕ್ಷೆ ಪಾರವ್ವ ಆರೇರ, ಮುಖಂಡರಾದ ಚಂದ್ರಣ್ಣ ನಡುವಿನಮನಿ, ಹನುಮರೆಡ್ಡಿ ನಡುವಿನಮನಿ, ಎಫ್ ಸಿ ಪಾಟೀಲ, ಬಸವರಾಜ ಸಾಲಿ, ರಾಜೇಶ ಕಮ್ಮಾರ, ಎಮ್ ಎಮ್ ಮಕಾಂದಾರ, ಬಸನಗೌಡ ಪಾಟೀಲ, ಮಾಲತೇಶ ಸಾಲಿ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

loading...