ಹೆಚ್ಚುತ್ತಿರುವ ಬಿಸಿಲಿನ ತಾಪ: ನೀರಿಗಾಗಿ ಹಾಹಾಕಾರ

0
17
loading...

ಮಹಾಂತೇಶ ಹಡಪದ

ರೋಣ: ಬೀರು ಬೇಸಿಗೆಯಲ್ಲಿ ಎಲ್ಲರೂ ತನ್ನನೆಯ ಗಾಳಿಯನ್ನು ನೀರನ್ನು ಪಡೆಯುವುದು ಲೋಕರೂಢಿಯಾಗಿದ್ದು,ಇಂದು ಪ್ರಕೃತಿಯ ವಿಕೋಪದಿಂದ ವಾತಾವರಣದಲ್ಲಿ ಏರುಪೇರುಂಟಾಗಿರುವುದನ್ನು ಇಂದಿನ ಬೇಸಿಗೆಯ ಕಾಲದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಆವರಿಸಿರುವುದನ್ನು ನಾವೆಲ್ಲಾ ಕಾಣುತ್ತಲಿದ್ದೇವೆ.
ನೀರಿಗಾಗಿ ಹಾಹಾಕಾರ: ಎಲ್ಲಡೆಯೂ ನೀರಿನ ಬವಣೆಯೂ ತಪ್ಪಿಲ್ಲಾ. ನೀರಿಗಾಗಿ ಜನತೆಯೂ ತಮ್ಮದೆ ಆದ ರೀತಿಯಲ್ಲಿ ಪಡಬಾರದ ಸ್ಥಿತಿಯನ್ನು ಪಡೆಬೇಕಾಗಿದೆ.

ಪಾಣಿಗಳ ಪಾಡು ಹೇಳತೀರದು: ಬೇಸಿಗೆಯಕಾಲ ಆವರಿಸುತ್ತಲಿದ್ದಂಹಂಗೆ ನೀರನ್ನು ಪೂರೈಸುವಲ್ಲಿ ಜನತೆಯು ಅನೇಕ ರೀತಿಯಲ್ಲಿ ಕಷ್ಟನಷ್ಟಗಳನ್ನು ಪಡುವುದರ ಜೊತೆಗೆ ಸುಮಾರು ಕಿ,ಮೀಗಳನ್ನು ಕ್ರಮಿಸಿ ನೀರನ್ನು ಪಡೆಯುತ್ತಿರುವ ಗ್ರಾಮಗಳು ತಾಲೂಕಿ ಮತಕ್ಷೇತ್ರದಲ್ಲಿ ಉದಾಹರಣೆಗಳನ್ನು ನೋಡಲಾಗಿದ್ದು,ಇಂದು ಪ್ರಾಣಿಗಳು ಯಾವ ರೀತಿಯ ಕ್ಷಣಗಳನ್ನು ಪಡೆಯುತ್ತಲಿರುವುದನ್ನು ಊಹೆ ಮಾಡಿಕೊಂಡರೇ ಮನಸ್ಸಿಗೆ ನೋವುಂಟಾಗುತ್ತದೆ.
ನೂರಾರು ಕುರಿಕಾರರ ಸಮೂಹ: ತಾಲೂಕಿನಲ್ಲಿ ವಿವಿಧ ತಾಲೂಕಿನ ಕುರಿಕಾರರ ಸಮೂಹವು ಬಿಡಾರವನ್ನು ಹುಡಿದ್ದು,ಅಥಣಿ,ಕುಷ್ಟಗಿ,ಕೊಪ್ಪಳ,ಬಾದಾಮಿ ತಾಲೂಕಿನಿಂದ ರೋಣ ತಾಲೂಕಿನಲ್ಲಿ ಕುರಿಕಾರರ ಸಮೂಹವು ಇಲ್ಲಿಯೇ ತಂಗಿದ್ದು,ಅಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕುರಿಸಾಕಾಣೆಯು ಬಲು ಕಟೀಣತೆಯಿಂದ ಕುಡಿದಾಗಿದ್ದು,ಬಯಲು ಪ್ರದೇಶಗಳಲ್ಲಿ ಮೇವಿಗಾಗಿ ತಂಗುವುದು ವಾಡಿಕೆಯಾಗಿದೆ.ಆನಿಟ್ಟಿನಲ್ಲಿ ನೀರಿನ ಪೊರೈಕೆಯು ಅಷ್ಟೇ ಕಟೀನಕರವಾಗಿ ಗೋಚರಿಸುತ್ತದೆ.

ಆಕಾಶ ಗಂಗೆಯಾಗಿ ಕೆರೆ: ಪ್ರಾಣಿ ಸಂಕೂಲಕ್ಕೆ,ಮಾನವರಿಗೆ ಆಕಾಶಗಂಗೆಯಾಗಿ ಎಲ್ಲರ ಮನವನ್ನು ದಾಹದಿಂದ ಬರುವವರಿಗೆ ಆಸರೆಯನ್ನು ನೀಡಿದ ಗಂಗೆಯಾಗಿ ಹೊರೊಮ್ಮಿದ ಕೆರೆಯು ಇದು.ತಾಲೂಕಿನ ರೋಣ ಹಾಗೂ ಚಿಕ್ಕಮಣ್ಣೂರ ಗ್ರಾಮದ ನಡುವೆಯಲ್ಲಿ ಹೆದ್ದಾರಿಗೆ ಹೊಂದಿಕೊಂಡ ರೈತ ಕುಟುಂಬದ ಜಮೀನಿನಲ್ಲಿ ತೆರೆಯಲಾದ ಈ ಕೆರೆಯು ಮರಭೂಮಿಯಲ್ಲಿ ಓಯಾಸಿಸ್ ಎನ್ನುವ ರೀತಿಯಲ್ಲಿ ಕಾಣುತ್ತಲಿದ್ದು,ಬೀರು ಬೇಸಿಗೆಯಲ್ಲಿಯೂ ಕೂಡಾ ನೀರಿನಿಂದ ತುಂಬಿಕೊಂಡು ನೂರಾರು ಜೀವಿಗಳಿಗೆ ಆಶ್ರಯವನ್ನು ನೀಡುತ್ತಲಿರುವ ಪಾವನಗಂಗೆಯಾಗಿದೆ.
ನೂರಾರು ಕಿ.ಮೀ ಕ್ರಮಿಸಿ,ನೀರಿಗಾಗಿ ಕೆರೆಯು ಆಶ್ರಯ : ಈ ಕೆರೆಯು ಜೀವಿಗಳಿಗೆ ಅದರಲ್ಲೂ ಕುರಿಕಾರರು ತಾಲೂಕಿಗೆ ಆಗಮಿಸಿದ ವಿವಿಧ ತಾಲೂಕಿನಿಂದ ಬಂದಂತಹ ಕುರಿಕಾರರಿಗೆ ಭೂಮಿಯನ್ನು ಕ್ರಮಿಸಿ ಕುರಿಗಳಿಗೆ ನೀರನ್ನು ಪೂರೈಸುವಂತಹ ಗಂಗೆಯಾಗಿ ಹೊರಹೊಮ್ಮಿದೆ.ಕುರಿಕಾರರು ಅಲ್ಲಿನ ಸಮೀಪದ ನೀರಿನ ಟ್ಯಾಂಕರ್ಗಳ ಮೂಲಕ ನೀರನ್ನು ತುಂಬಿಕೊಂಡು ಸಾವಿರಾರು ಕುರಿಗಳಿಗೆ ನೀರನ್ನು ಪೊರೈಕೆ ಮಾಡುತ್ತಿರುವುದು ವಿಶೇಷವಾದ ಸಂಗತಿಯಾಗಿದೆ.

loading...