123 ಕೆ.ಜಿ ಶ್ರೀಗಂಧ ಕಟ್ಟಿಗೆ ವಶ ಆರೋಪಿಗಳ ಬಂಧನ

0
17
loading...

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಸೀಮೆಯಲ್ಲಿ ಇಬ್ಬರು ಆರೋಪಿಗಳು ಶ್ರೀಗಂಧದ ಗಿಡಗಳನ್ನು ತಗೆದುಕೊಂಡು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದು. ಅದನ್ನು ವಿಜಯಪುರಕ್ಕೆ ಸಾಗಿಸುವದಿದ್ದಾಗ ಅದರ ಖಚಿತ ಮಾಹಿತಿಯನ್ನು ಪಡೆದುಕೊಂಡು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂಧಿಯವರು ಆರೋಪಿಗಳನ್ನು ಮಾಲು ಸಮೇತವಾಗಿ ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಶನಿವಾರ ನಡೆದಿದೆ. ಇದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಿರೇಬೇವನೂರ ಗ್ರಾಮದ ಸೀಮೆಯಲ್ಲಿ ಶ್ರೀಗಂಧ ಗಿಡಗಳನ್ನು ಪಡೆದುಕೊಂಡು ಮಾರಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿಯನ್ನು ಪಡೆದುಕೊಂಡಿದ್ದರು. ಆದರೆ ಅದರಲ್ಲಿ 123 ಕೆಜಿ ಶ್ರೀಗಂದ ಕಟ್ಟಿಗೆಯನ್ನು ಸುಮಾರು 1.98 ಲಕ್ಷ ರೂಗಳ ಬೆಲೆ ಬಾಳುವ ಶ್ರೀಗಂಧವನ್ನು ತಗೆದುಕೊಂಡು ಕೆಂಪು ಬಣ್ಣ ಕಾರಿನಲ್ಲಿ ಇಂಡಿ-ಹಿರೇರೂಗಿ ಮಾರ್ಗವಾಗಿ ವಿಜಯಪುರಕ್ಕೆ ಸಾಗಾಟ ಮಾಡುವ ಸಂದರ್ಭದಲ್ಲಿ ಇಬ್ಬರು ಕೇರಳ ರಾಜ್ಯದ ಕಾಸಗೂಡಿನನವರು ಆರೋಪಿಗಳಾದ ಉದಯಕುಮಾರ ಕುಂಜಿಕೃಷ್ಣ ಹಾಗೂ ಮುಮಹದ ಅಬ್ದುಲ್ ಎಂ ಇವರನ್ನು ಬಂಧಿಸಿದ್ದಾರೆ. ಈ ಐಪಿಎಸ್ ಅಧಿಕಾರಿ ಶ್ರೀನಿವಾಸಗೌಡ ಆರ್ ಹಾಗೂ ಡಿವೈಎಸ್‍ಪಿ ರವೀಂದ್ರ ಶಿರೂರ, ಸಿಪಿಐ ಸಾಹೇಬಗೌಡ ಪಾಟೀಲ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಎಸೈ ಝಡ್.ಎನ್. ಮೋಕಾಸೆ ಹಾಗೂ ಸಿಬ್ಬಂಧಿಗಳಾದ ವಿಜಯ ರಾಠೋಡ, ಸಂಜಯ ಕಾಂಬ್ಳೆ, ಬಿ.ಎಸ್.ಗುರಬಾಳ, ರಾಘು ಕಡದರಾಳ, ಆರ್.ಸಿ.ಕುಂಬಾರ ಇವರೆಲ್ಲರೂ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಪ್ರಕರಣವನ್ನು ಎ.ಎಸ್.ಐ ಎಸ್.ಎಸ್. ತಳವಾರ ಇವರು ಪ್ರಕರಣವನ್ನು ದಾಖಲಿಸಿಕೊಂಡರು.

loading...