14 ಪ್ರಾಜೆಕ್ಟ ರಾಜ್ಯ ತಂತ್ರಜ್ಞಾನ ಪ್ರಾಯೋಜಕತ್ವಕ್ಕೆ ಆಯ್ಕೆ

0
23
loading...

ಚಿಕ್ಕೋಡಿ 06: ಸ್ಥಳೀಯ ಕೆಎಲ್‌ಇ ಆಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ದಪಡಿಸಿದ 14 ಪ್ರಾಜೆಕ್ಟಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಐಐಎಸ್‌ಸಿ ಕ್ಯಾಂಪಸ್‌ ಬೆಂಗಳೂರು ಪ್ರಾಯೋಜಕತ್ವಕ್ಕೆ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಾಚಾರ್ಯರಾದ ಡಾ. ಸಿದ್ರಾಮಪ್ಪ ಇಟ್ಟಿ ತಿಳಿಸಿದ್ದಾರೆ.ಮೆಕ್ಯಾನಿಕಲ್‌ ವಿಭಾಗದ 06 ಪ್ರಾಜೆಕ್ಟಗಳು, ಕಂಪ್ಯೂಟರ ಸಾಯನ್ಸ ವಿಭಾಗದ 04 ಪ್ರಾಜೆಕ್ಟಗಳು, ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ವಿಭಾಗದ 03 ಪ್ರಾಜೆಕ್ಟಗಳು ಹಾಗೂ ಸಿವಿಲ್‌ ವಿಭಾಗದ 01 ಪ್ರಾಜೆಕ್ಟ ಆಯ್ಕೆಯಾಗಿವೆ.ಕೆ.ಎಲ್‌.ಇ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಪ್ರಾಧ್ಯಾಪಕರಿಗೆ ಅಭಿನಂದಿಸಿದ್ದಾರೆ.

loading...