15ರ ಅನೀಶ್ ಭಾರತಕ್ಕೆ  ‘ಬಂಗಾರ’ದ ಕಾಣಿಕೆ

0
14
ಗೋಲ್ಡ್‌ ಕೋಸ್ಟ್‌: ಭಾರತದ ಅತಿ ಚಿಕ್ಕ ವಯಸ್ಸಿನ ಕ್ರೀಡಾಪಟು ಅನೀಶ್‌ ಭಾನ್‌ವಾಲ್‌‌ ಭಾರತಕ್ಕೆ ಚಿನ್ನದ ಕಾಣಿಕೆ ನಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್‌ನಲ್ಲಿ ಭಾರತ ಈವರೆಗೆ 16 ಚಿನ್ನ ಗೆದ್ದಂತಾಗಿದೆ.
ಕೇವಲ 15 ವರ್ಷದ ಅನೀಶ್‌ ಭಾನ್‌ವಾಲ್‌‌ ಕಾಮನ್‌ವೆಲ್ತ್‌ ಗೇಮ್ಸ್‌‌ನ ಪುರುಷರ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಹಿಂದೆ ಸಹ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಪುರುಷರ 25 ಮೀ. ರ‍್ಯಾಪಿಡ್‌ ಫೈರ್ ಪಿಸ್ತೂಲ್ ಜೂನಿಯರ್ ಇವೆಂಟ್‌ನಲ್ಲಿ ಶೂಟರ್ ಅನೀಶ್ ಭಾನ್‌ವಾಲ್‌ ಬಂಗಾರದ ಪದಕ ಜಯಿಸಿದ್ದರು.
loading...