150 ಕ್ಷೇತ್ರಗೆದ್ದು ಬಿಜೆಪಿ ಸರ್ಕಾರ ಬರುವದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ

0
16
loading...

ಬೀಳಗಿ: ಸಿ.ಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಢಳಿತ, ಗುಂಡಾರಾಜ್ಯ ಮಾಡಿರುವದನ್ನು ರಾಜ್ಯದ ಜನತೆ ನೋಡಿ ಆಕ್ರೋಶಗೊಂಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಪಟ್ಟಣದ ಬಿಜೆಪಿ ಕಾರ್ಯಲಯದ ಆವರಣದಲ್ಲಿ ಮಂಗಳವಾರ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಮುರುಗೇಶ್ ನಿರಾಣಿಯವರು ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ರೂ.3 ಲಕ್ಷ ಕೋಟಿ ರಾಜ್ಯಕ್ಕೆ ಕೊಟ್ಟಿದೆ ಆ ಹಣವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿ ಮಾಡಲಿಲ್ಲಾ ಎಂದು ಆರೋಪಿಸಿದರು. ಕಳೆದ 4-5 ತಿಂಗಳು ಸರ್ಕಾರಿ ಕಾರ್ಯಕ್ರಮವೆಂದು ದುಡ್ಡು ನೀಡಿ ಜನರನ್ನು ಕರೆತಂದು ಸುಳ್ಳು ಭರವಸೆಯನ್ನು ಕೊಟ್ಟು ರೂ.20 ಸಾವಿರ ಕೋಟಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಮಾಜ, ಧರ್ಮ, ಸಮುದಾಯಗಳನ್ನು ಒಡೆಯುವಂತ ಪ್ರಯತ್ನ ಮಾಡಿ ಜನರ ಭಾವನಾತ್ಮಕವಾಗಿ ದಾರಿ ತಪ್ಪಿಸಿ ತಮ್ಮ ಕೀಳು ಮಟ್ಟದ ರಾಜಕೀಯಕ್ಕೆ ಇಳಿದ್ದಿದ್ದಾರೆ ಮತ್ತು ಸರ್ಕಾರಿ ನೌಕರರ ವರ್ಗಾವಣೆ ದಂಧೆಯಲ್ಲಿ ನಿರತರಾಗಿ ಸರ್ಕಾರವು ಭ್ರಷ್ಟಚಾರದಲ್ಲಿ ತಾಂಡವವಾಡುತ್ತಿದೆ ಎಂದು ಆಕ್ರೋಶಗೊಂಡು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ರೂ.10 ಸಾವಿರ ಕೋಟಿ ಖರ್ಚು ಮಾಡುತ್ತೇವೆಂದು ಕೃಷ್ಣೆ ಮೇಲೆ ಆನೆ ಮಾಡಿ ಇಂದು ಅವಧಿಯ ಐದು ವರ್ಷದಲ್ಲಿ ಒಟ್ಟು ರೂ. 9 ಸಾವಿರ ಕೋಟಿ ಕರ್ಚು ಮಾಡಿದ್ದಾರೆ. ಈ ರೀತಿ ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡಿರುವದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ ಅವರು ರಾಜ್ಯದ ಜನತೆ ನೀಡಿರುವ ತೆರೆಗೆ ಹಣವನ್ನು ಲೂಟಿ ಮಾಡಿ ಹೈಕಮಾಂಡ್‍ಗೆ ಒಪ್ಪಿಸುವಂತ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೆ.ಪಿ.ನಂಜುಂಡಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಎಚ್ ಆರ್ ನಿರಾಣಿ, ಎಸ್.ಎಂ ಕಟಗೇರಿ, ಮಹಾಂತೇಶ್ ಕೋಲಕಾರ್, ಹೂವಪ್ಪ ರಾಠೋಡ, ಡಾ.ಬಾಬುರಾಜೇಂದ್ರ ನಾಯಕ್, ಬಲರಾಮ ನಾಯಕ, ಈಶ್ವರ ಅಂತರಗೊಂಡ, ಕೆ.ವ್ಹಿ.ಪಾಟೀಲ್, ಬೆನ್ನಪ್ಪ ಬೀಳಗಿ, ಸಿದ್ದಣ್ಣಗೌಡ ವಲ್ಲಿಗೌಡರ, ರವಿ ದೇಸಾಯಿ, ಶರತಚಂದ್ರ ನಾಡಗೌಡ, ಪ್ರಕಾಶ ತಪಶಟ್ಟಿ, ರಾಮನಗೌಡ ಹಳೆಗೌಡರ ಮತ್ತು ರಾಮನಗೌಡ ಭಸರಡ್ಡಿ ಸೇರಿದಂತೆ ಅನೇಕರು ಇದ್ದರು.

loading...