0
18
loading...

ಕನ್ನಡಮ್ಮ ಸುದ್ದಿ-ಕುಮಟಾ: ಹೊನ್ನಾವರದ ಕರ್ಕಿಯಲ್ಲಿ ಗೋ ರಕ್ಷಣೆಗೆ ತೆರಳಿದ್ದ ಹಾಲಕ್ಕಿ ಗೌಡ ಸಮಾಜದ ಮುಖಂಡ ಸುಬ್ರಾಯ ಗೌಡ ಹಾಗೂ ಮಾಬ್ಲು ಗೌಡ ಅವರ ವಿರುದ್ದ ದಾಖಲಾದ ಸುಳ್ಳು ಪ್ರಕರಣವನ್ನು ವಾಪಸ್ ಪಡೆದು ಶೀಘ್ರದಲ್ಲಿ ಬಿಡುಗಡೆ ಗೊಳಿಸಬೇಕೆಂದು ಹಾಲಕ್ಕಿ ಗೌಡ ಸಮಾಜದ ಕುಮಟಾ-ಹೊನ್ನಾವರ ತಾಲೂಕಾಧ್ಯಕ್ಷ ಗೋವಿಂದ ಗೌಡ ಒತ್ತಾಯಿಸಿದರು.

ರೀತಿ ಒಬ್ಬ ಯುವ ಮುಖಂಡನ ಮೇಲೆ ವ್ಯವಸ್ಥಿತ ಪಿತೂರಿ ನಡೆಸಿ ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಕೂಡಾ ಅಮಾನವೀಯವಾಗಿ ವರ್ತಿಸಿ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟಿರುತ್ತಾರೆ. ಹಾಗಾಗಿ ಅವರ ಮೇಲೆ ಕೊಲೆ ಯತ್ನದ ಕಲಂ 307 ನ್ನು ದಾಖಲಾದ ಸುಳ್ಳು ಪ್ರಕರಣವನ್ನು ವಾಪಸ್ ಪಡೆದು, ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು. ಅಲ್ಲದೇ ಪೆÇಲೀಸರು ಘಟನೆ ನಡೆದ 24 ಗಂಟೆಯ ಬಳಿಕ ಮಾ 9 ರಂದು ಸುಬ್ರಾಯ ಗೌಡ, ಮಾಬ್ಲು ಗೌಡ, ನಾಮಧಾರಿ ಮುಖಂಡ ಸೂರಜ ನಾಯ್ಕ ಸೋನಿ ಸೇರಿದಂತೆ 8 ಮಂದಿ ಅಮಾಯಕರ ವಿರುದ್ಧ ಕಲಂ 307 ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ, ಬಂಧಿಸುವ ಮೂಲಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ವೆಂಕಟೇಶ ಗೌಡ, ದೀವಗಿ ಗ್ರಾಪಂ ಅಧ್ಯಕ್ಷ ಕೃಷ್ಣ ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಅರುಣ ಗೌಡ, ಸಮಾಜದ ಪ್ರಮುಖರಾದ ಅಶೋಕ ಗೌಡ, ಮಂಜುನಾಥ ಗೌಡ ಕುಡ್ಲೆ, ಶಂಕರ ಗೌಡ, ಜಟ್ಟು ಗೌಡ, ಮಂಜುನಾಥ ಗೌಡ ವಾಲಗಳ್ಳಿ, ಗುರು ಗೌಡ, ಪ್ರದೀಪ ಗೌಡ, ಟಿ ಎನ್ ಗೌಡ, ವಿಷ್ಣು ಗೌಡ, ಕೇಶವ ಗೌಡ ಹಾಗೂ ಕುಮಟಾ, ಹೊನ್ನಾವರ ಮತ್ತು ಗೋಕರ್ಣ ಭಾಗದ ಹಾಲಕ್ಕಿ ಗೌಡ ಸಮಾಜದ ಮುಖಂಡರು ಉಪಸ್ಥಿತರಿದ್ದರು.

loading...