0
13
loading...

ಕನ್ನಡಮ್ಮ ಸುದ್ದಿ-ಕುಮಟಾ: ಸೋಂಕಿತ ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವಂತೆ ಕೌಶಲ್ಯ ತರಬೇತಿ ತೀರ ಅವಶ್ಯಕವಾಗಿದೆ ಎಂದು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಶ್ರೀನಿವಾಸ್‌ ನಾಯಕ ಅಭಿಪ್ರಾಯ ಪಟ್ಟರು.
ಅವರು ಬುಧವಾರ ಇಲ್ಲಿನ ತಾಲೂಕ ಆಸ್ಪತ್ರಯಲ್ಲಿ ಕರ್ನಾಟಕ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ, ಸಂರಕ್ಷ, ಸಿ ಎಸ್‌ ಸಿ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಹೆಚ್‌ ಐ ವಿ ಸೋಂಕಿತ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಸಾಮಾಜಿಕ ಸವಲತ್ತುಗಳ ಕುರಿತು ತರಬೇತಿ ಕಾರ್ಯಗಾರವನ್ನು ಉಧ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಖ್ಯವಾಹಿನಿಯಲ್ಲಿ ಮುಂದೆ ಬರಬೇಕಾದರೆ ಇಂತಹ ತರಬೇತಿಯಿಂದ ತುಂಬಾ ಅನೂಕೂಲವಾಗುತ್ತದೆ. ತಾನು ಸೋಂಕಿತನೆಂಬ ಕೀಳರಿಮೆ ಹೊಗಲಾಡಿಸಲು ಇಂತಹ ತರಬೇತಿಗಳು ಉಪಯೋಗವಾಗುತ್ತದೆ. ಇದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಪೋಷ್ಟಿಕಾಂಶ ಆಹಾರ ತೆಗೆದುಕೊಳ್ಳಬೇಕು.
ಸಿಂಡಕೆಟ್‌ ಬ್ಯಾಂಕ್‌ನ ಶಿವಾನಂದ ನಾಯ್ಮ, ಶಿಕ್ಷಣ ಇಲಾಖೆಯ ಬೇಬಿ ಎಂ ವೈದ್ಯ, ಮಹಿಳಾ ಅಭಿವೃದ್ಧಿ ನಿಗಮದ ಸೋನಾ ನಾಯ್ಕ, ಮಕ್ಕಳ ರಕ್ಷಣಾ ಘಟಕದ ನಂದಿನಿ, ಪಶು ಇಲಾಖೆಯ ಡಾ ವಿಶ್ವನಾಥ ಹೆಗಡೆ ಇವರು ತಮ್ಮ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ್ದರು.
ಕುಮಟಾ ಆಪ್ತಮಾಲೋಚಕ ಪ್ರದೀಪ್‌ ನಾಯ್ಕ ಸ್ವಾಗತಿಸಿದ್ದರು. ಜಿಲ್ಲಾ ಮೇಲ್ವಿಚಾರಕ ಮನೋಜ್‌ ನಾಯಕ ನಿರೂಪಿಸಿದ್ದರು.
ಕಾರ್ಯಕ್ರಮದಲ್ಲಿ ಇಪ್ಪತೈದಕೂ ಹೆಚ್ಚು ಸೊಂಕಿತ ಮಕ್ಕಳು ಮತ್ತು ಪಾಲಕರು, ಸಂರಕ್ಷಾ ಸ್ವಯಂಸೇವಾ ಸಂಸ್ಥೆ ಪ್ರತಿನಿಧಿಗಳಾದ ಜಯಶ್ರೀ ಮತ್ತು ಸಂಗಡಿಗರು, ಐ ಸಿ ಟಿ ಸಿ ಆಪ್ತಸಮಾಲೋಚಕ ವಿನಾಯಕ ಪಟಗಾರ ಉಪಸ್ಥಿತರಿದ್ದರು.

loading...