224 ಕ್ಷೇತ್ರಗಳಲ್ಲಿಯೂ ಹೊಸ ಕಾಂಗ್ರೆಸ್‌ ಅಭ್ಯರ್ಥಿಗಳ ಸ್ಪರ್ಧೆ: ಅಯೂಬ್‌ಖಾನ್‌

0
30
loading...

ಚಿಕ್ಕೋಡಿ 06: ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಹೊಸ ಕಾಂಗ್ರೆಸ್‌ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್‌ ಖಾನ ಹೇಳಿದರು.ಪಟ್ಟಣದ ಹೊಸ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸಿತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ದೇಶದ ಹಿತ ಮರೆತಿದ್ದು ಮತಕ್ಕಾಗಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ ಎಂದರು.ರಾಜ್ಯದಲ್ಲಿ ರಾಜಕಾರಣಿಗಳಿಂದ ಸಾರ್ವಜನಿಕರ ಹಣದ ಲೂಟಿಯನ್ನು ತಡೆಯಲು ನೂತನ ಪಕ್ಷವನ್ನು ಸ್ಥಾಪಿಸಲಾಗಿದೆ ಎಂದರು.ತಮ್ಮ ಪಕ್ಷ ಆಡಳಿತಕ್ಕೆ ಬಂದರೆ 60 ವರ್ಷ ಮೇಲ್ಟಪಟ್ಟವರಿಗೆ ಕೃಷಿಕರಿಗೆ 8 ಸಾವಿರ ಪಿಂಚಣಿ ನೀಡಲಾಗುವದು ಎಂದರು. ತಮ್ಮ ಪಕ್ಷ ಮುಂದಿನ ಚುನಾವನೆಯಲ್ಲಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನ ದೇಶ ನಮ್ಮ ಹಕ್ಕು ಯೋಜನೆ ಅಡಿಯಲ್ಲಿ ಮನ ಮನೆಗೆ ಸಂವಿಧಾನದ ಪುಸ್ತಕ ವಿತರಣೆ ಮಾಡಿ ದೇಶದಲ್ಲಿ ಕಾನೂನು ಅರಿವು ಮಾಡಿಸಲಾಗುವದು ಎಂದರು. ಪ್ರತಿಯೊಂದು ಜಿಲ್ಲೆಯಲ್ಲಿ ರೈತರ ಪ್ರಾಧಿಕಾರ ಸ್ಥಾಪನೆ ಮಾಡಲಾಗುವದು. ಜಮೀನು ಇಲ್ಲದ ಪ್ರತಿ ಕುಟಂಬಗಳಿಗೆ ಎರಡು ಎಕರೆ ಭೂಮಿ ನೀಡಲಾಗುವದು.ಭಾರತೀಯ ಹೊಸ ಕಾಂಗ್ರೆಸ್‌ ಪಕ್ಷ ಕರ್ನಾಟಕದ ಉಸ್ತುವಾರಿ ಎಂ.ಎಂ. ಖಾಜಿ ಮಾತನಾಡಿ, ದೇಶದಲ್ಲಿನ ಸೈನಿಕರ ಹಿತ ಕಾಪಾಡುವಲ್ಲಿ ಮೋದಿ ಅವರ ಸರಕಾರ ವಿಫಲವಾಗಿದೆ ಎಂದರು. ದೇಶದಲ್ಲಿನ ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತು ಹೀಗಿದ್ದಾರೆ ಇದರಿಂದಾಗಿ ಎಲ್ಲಾರು ಭಾರತೀಯ ಹೊಸ ಕಾಂಗ್ರೆಸ್‌ ಪಕ್ಷದತ್ತ ಒಲವು ತೋರುತ್ತಿದ್ದಾರೆ ಎಂದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು ಹಾಗೂ ಎಲ್ಲಾ ವರ್ಗದ ಜನರ ಹಿತ ಕಾಪಾಡಲು ವಿಶೇಷ ಯೋಜನೆ ರೂಪಸಿಲಾಗುವದು ಎಂದರು.ತಂಬಾಖು ಮುಕ್ತ ರಾಜ್ಯ ನಿರ್ಮಾಣ ಮಾಡಲು ರಾಜ್ಯದಲ್ಲಿನ ಎಲ್ಲಾ ಕ್ಯಾನ್ಸರ ಪೀಡಿತ ರೋಗಿಗಳಿಗೆ ಜೀವ ರಕ್ಷಕ ಯೋಜನೆಯಡಿಯಲ್ಲಿ ಉಚಿತ ಮನೆ ವಿತರಣೆ ಮಾಡಲಾಗುವದು ಎಂದರು.ರಾಜ್ಯದಲ್ಲಿನ ಎಲ್ಲಾ ಪದವಿ ಪೂರ್ವ ನಿರುದ್ಯೋಗಿಗಳಿಗೆ ಚೈನಾ ಮಾದರಿಯಲ್ಲಿ ಅವರ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಸಂಘ ಸಂಸ್ಥೆಯಲ್ಲಿ ಉದ್ಯೋಗ ನೀಡಲು ಕ್ರಮ ಜರಗಿಸಲಾಗುವದು ಎಂದರು.

ಈ ಸಂದರ್ಭದಲ್ಲಿ ಬಿ.ಎಲ್‌.ನದಾಫ,ಕೆ.ಬಿ.ಹೊಸೂರ,ಸುನೀಲ ಗುಡಾಜ ಉಪಸ್ಥಿತರಿದ್ದರು.

loading...