30 ಗ್ರಾಮಗಳ ಹೊಲಗಳಿಗೆ ನೀರಾವರಿ : ಬಸವರಾಜ

0
19
loading...

ಬ್ಯಾಡಗಿ: ಕಳೆದ 10 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆಯನ್ನು ಮುಖ್ಯಮಂತ್ರಿಗಳಿಂದ ಹೆಚ್ಚು ಅನುದಾನ ಬಿಡುಗಡೆ ಮಾಡಿಸುವ ಮೂಲಕ ಪೂರ್ಣಗೊಳಿಸಿ, ಸುಮಾರು 30 ಗ್ರಾಮಗಳ ಹೊಲಗಳಿಗೆ ನೀರುಣಿಸುವ ಭಾಗ್ಯ ಕಲ್ಪಿಸಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಐದು ವರ್ಷದ ಹಿಂದೆ ತಾವು ಕ್ಷೇತ್ರದ ಪ್ರಚಾರ ವೇಳೆ ನೀಡಿದ್ದ ಹತ್ತಾರು ಭರವಸೆಗಳನ್ನು ಈಡೇರಿಸಿದ್ದೇನೆ. ಹೀಗಾಗಿ ಮಲೆನಾಡು ಪ್ರದೇಶದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿದೆ. ಚಿಕ್ಕಬಾಸೂರು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಸುಮಾರು 35 ಗ್ರಾಮಗಳಿಗೆ ಹೊಳೆನೀರು ಪೂರೈಕೆ ಮಾಡಿದ್ದೇನೆ. ಕೊಟ್ಟ ಮಾತಿನಂತೆ ಅಸುಂಡಿ ಕೆರೆಯೋಜನೆ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ತಾಲೂಕಿನ ಎಲ್ಲ ರಸ್ತೆಗಳು ಗುಣಮಟ್ಟವಾಗಿ ನಿರ್ಮಿಸಿದೆ. ಹಿಂದುಳಿದ ವರ್ಗಗಳ ಮಕ್ಕಳಿಗೆ ವಿಶೇಷ ವಸತಿ ನಿಲಯಗಳು ಆರಂಭವಾಗಿವೆ. ರಾಜ್ಯದಲ್ಲಿ ನಾವು ಉತ್ತಮ ಸರ್ಕಾರ ನೀಡಿದ್ದೇವೆ. ಬಿಜೆಪಿಯ ಹಗರಣ ಹಾಗೂ ದುರಾಢಳಿತದಿಂದ ಬೇಸತ್ತ ಜನ ಈ ಬಾರಿಯೂ ಸೋಲಿನ ರುಚಿ ತೋರಿಸಲಿದ್ದಾರೆ. ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರ ಹಾಗೂ ಹಗರಣಗಳಿಲ್ಲದ ಸ್ವಚ್ಛ ಆಢಳಿತ ನಡೆಸಿರುವ ಕಾಂಗ್ರೆಸಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು.
ಮಾದ್ಯಮಗಳಲ್ಲಿ ತಪ್ಪು ಹೇಳಿಕೆಗಳಿಂದ ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟವಾಗದಿರುವುದು ಇನ್ನಷ್ಟು ಗೊಂದಲ ಮೂಡಿಸಿದೆ. ಎಐಸಿಸಿ ಸಮಿತಿ ಒಂದೆರಡು ದಿನಗಳಲ್ಲಿ ಪಟ್ಟಿಯನ್ನು ಹೊರಬಿಡಲಿದ್ದು, ಯಾರಿಗೆ ಟಿಕೇಟ್ ಸಿಕ್ಕರೂ ತಾವು ಪಕ್ಷದ ನಿಷ್ಟೆ ಹಾಗೂ ಸಿದ್ದಾಂತಗಳಿಗೆ ಬದ್ದನಾಗಿರುವೆ. ವಿನಾಕಾರಣ ಗೊಂದಲ ಎಬ್ಬಿಸುವುದು ಬೇಡ. ಕಾರ್ಯಕರ್ತರು, ಯಾರಿಗೆ ಪಕ್ಷ ಟಿಕೇಟ್ ಘೋಷಿಸಿದರೂ ಅಂತಹ ಅಭ್ಯರ್ಥಿಗಳ ಬೆಂಬಲಿಸಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಪ.ಸದಸ್ಯರಾದ ಅಬ್ದುಲ್‍ಮುನಾಫ್ ಎಲಿಗಾರ, ರಾಜೇಶ ಗುಂಡಟ್ಟಿ, ಗಣೇಶ ಮುಗ್ಗಟ್ಟಿ, ಯಲ್ಲನಗೌಡ ಮಣ್ಣೂರು, ಎಪಿಎಂಸಿ ಅಧ್ಯಕ್ಷ ಚನ್ನಬಸಪ್ಪ ಹುಲ್ಲತ್ತಿ, ತಾ.ಪಂ.ಸದಸ್ಯರಾದ ಪ್ರಭುಗೌಡ್ರ ಪಾಟೀಲ, ಜಗದೀಶ ಪೂಜಾರ ಮುಖಂಡರಾದ ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ಶಂಕ್ರಗೌಡ್ರ ಪಾಟೀಲ, ದಾನಪ್ಪ ಚೂರಿ, ಹುಚ್ಚನಗೌಡ್ರ ಲಿಂಗನಗೌಡ್ರ, ಮಂಜನಗೌಡ್ರ ಲಿಂಗನಗೌಡ್ರ, ಎ.ಎ.ಮುಲ್ಲಾ, ಎಸ್.ಎ.ಸೌದಾಗರ ಇತರರಿದ್ದರು.

loading...