5.50 ಲಕ್ಷ ರೂ. ಅಕ್ರಮ ಮದ್ಯ ವಶ

0
18
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅಪಾರ ಪ್ರಮಾಣದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಪ್ರತ್ಯೇಕ ಎರಡು ಕಡೆಗಳಲ್ಲಿ ದಾಳಿ ನಡಿಸಿದ ಅಧಿಕಾರಿಗಳು ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮದ್ಯ ಮಾರಾಟ ಸೇರಿದಂತೆ ಸಾಗಾಟದ ಮೇಲೆ ನಿಗಾವಹಿಸಿದ್ದರು. ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಅಧಿಕಾರಿಗಳು 20 ಲೀಟರ್ ಗೋವಾ ಮದ್ಯ, ಒಂದು ಕಾರ್ ಮತ್ತು ಬೈಕ್ ವಶಪಡಿಸಕೊಂಡಿದ್ದಾರೆ. ವಶಪಡಿಸಕೊಂಡಿರುವ ಮದ್ಯ ಬೆಲೆ ಸುಮಾರು 5.50 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. ನೀತಿ ಸಂಹಿತೆ ಸಂದರ್ಭದಲ್ಲಿ ಅಕ್ರಮಗಳಿಗೆ ಅಧಿಕಾರಿಗಳು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

loading...