ಅಂಕಿ-ಅಂಶ ಪರಿಶೀಲನೆಯಲ್ಲಿ ರಾಜು ಕಾಗೆ ಮಗ್ನ

0
22
loading...

ಕಾಗವಾಡ 13: ಕಾಗವಾಡ ವಿಧಾನಸಭಾ ಚುನಾವಣೆಯಲ್ಲಿ ಕಳೇದ 15 ದಿನಗಳಿಂದ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಚಾರ ನಿಮಿತ್ಯ ಸುತ್ತಾಡಿದರೂ ಸುಸ್ತಾಗದೆ, ಬಿಜೆಪಿ ಅಭ್ಯರ್ಥಿ ರಾಜು ಕಾಗೆ ಬೆಳಗ್ಗೆ ದೇವರ ಪೂಜೆ ಕೈಕೊಂಡು ಉಗಾರದ ನಿವಾಸದಲ್ಲಿ ಉಳಿದು, ಬೆಳಗ್ಗೆಯಿಂದ ಹಳ್ಳಿಗಳಿಂದ ಬರುವ ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ಮಗ್ನರಾಗಿದ್ದರು.
15 ದಿನಗಳ ನಿರಂತರ ಓಡಾಟದಿಂದ ನಿಮಗೆ ಸುಸ್ತು ಆಗಿಲ್ಲವೇ ಎಂದು ವಿಚಾರಿಸದಾಗ ನಾನು ಕಳೆದ 30 ವರ್ಷಗಳಲ್ಲಿ 6 ವಿಧಾನಸಭಾ ಚುನಾವಣೆಗಳು ಎದುರಿಸಿದ್ದೇನೆ. ಚುನಾವಣೆಯಲ್ಲಿ ನಿರಂತರವಾಗಿ ಕಾರ್ಯಕರ್ತರು, ನನ್ನ ಪರ ಹಳ್ಳಿಗಳಲ್ಲಿ ಮತಗಳಯಾಚನೆ ಮಾಡುತ್ತಾ, ಕೆಲಸ ಮಾಡುತ್ತಾರೆ. ಕಾರ್ಯಕರ್ತರು ನನ್ನ ರಾಜಕೀಯ ಅಸ್ತಿ ಅವರ ಸುಖ, ದುಃಖದಲ್ಲಿ ಭಾಗಿಯಾಗುತ್ತಾ, ಇಡಿ ದಿನ ನಿನ್ನೆ ನಡೆದ ಮತದಾನದ ಅಂಕಿ ಅಂಶಗಳು ಪರಿಶೀಲನೆ ಮಡುತ್ತಾ, ಚರ್ಚೆಯಲ್ಲಿ ತೋಡಗಿದ್ದೇನೆ ಎಂದು ಶಾಸಕ ರಾಜು ಕಾಗೆ ಹೇಳಿದರು.

loading...