ಅಂಗನವಾಡಿಯಲ್ಲಿ ಗ್ಯಾಸ,ಆಹಾರ ಧಾನ್ಯಗಳ ಕಳವು; ತನಿಖೆ ಆರಂಭ

0
42
loading...

ಕನ್ನಡಮ್ಮ ಸುದ್ದಿ- ರಾಮದುರ್ಗ: ಓಬಳಾಪೂರ ಗ್ರಾಮದಲ್ಲಿ ಅಂಗನವಾಡಿ ಶಾಲೆಯಲ್ಲಿ ಗ್ಯಾಸ ಹಾಗೂ ಆಹಾರ ಧಾನ್ಯಗಳ ಕಳವು ಮಾಡಿರುವುದು ತಿಳಿದು ಬಂದಿದೆ ಸೂಕ್ತ ತನಿಖೆ ನಡಿಸಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಡಿಪಿಓ ಖಾದರಬಿ ಲಕ್ಷ್ಮೇಶ್ವರ ಹೇಳಿದರು.

ತಾಲೂಕಿನ ಓಬಳಾಪೂರ ಆರ್.ಎಲ್.ಟಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವು ಬೆಸಿಗೆಯ ರಜೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಅಂಗನವಾಡಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ನೀಲವ್ವ ಮಲ್ಲೇಶಿ ಲಮಾಣಿ ಇವರು ದೂರು ನೀಡಿದ್ದಾರೆ.
ಕಳುವಾದ ವಸ್ತುಗಳು :

ಗ್ಯಾಸ ಕಿಟ್, ಅಕ್ಕಿ ಚಿಲ, ಹಾಲಿನ ಪುಡಿ12 ಕೆಜಿ,13 ಕೆಜಿ ಸಕ್ಕರೆ,22 ಕೆಜಿ ಹೆಸರು ಬೆಳೆ,2 ಕೆಜಿ ಶೇಂಗಾ, 13 ಕೆಜಿ ಬೆಲ್ಲ, 10 ಕೆಜಿ ಅಡಿಗೆ ಎಣ್ಣಿ, ಬೆಡ ಸೀಟ ಸೇರಿಂದಂತೆ ಒಟ್ಟು 5.875 ರೂಗಳಷ್ಟು ಸಾಮಗ್ರಿಗಳು ಕಳುವಾಗಿವೆ. ಈ ಕುರಿತು ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

loading...